ADVERTISEMENT

ಕೋವಿಡ್‌ನ ಎರಡನೇ ಡೋಸ್‌ ಲಸಿಕೆ ಸ್ವೀಕರಿಸಿದ ರೋಯಿಂಗ್ ಸ್ಪರ್ಧಿಗಳು

ಪಿಟಿಐ
Published 4 ಏಪ್ರಿಲ್ 2021, 19:30 IST
Last Updated 4 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಸಜ್ಜಾಗುತ್ತಿರುವವರು ಸೇರಿ ಭಾರತದ 35 ರೋಯಿಂಗ್‌ ಪಟುಗಳಿಗೆ ಕೋವಿಡ್–19 ಲಸಿಕೆಯ ಎರಡನೇ ಡೋಸ್‌ಅನ್ನು ನೀಡಲಾಯಿತು. ಇದರೊಂದಿಗೆ ದೇಶದಲ್ಲಿ ಮೊದಲ ಬಾರಿ ಕ್ರೀಡಾ ಗುಂಪೊಂದು ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಂತಾಗಿದೆ.

ಸ್ಪರ್ಧಿಗಳು ಮಾತ್ರವಲ್ಲದೆ ಕೆಲವು ರೋಯಿಂಗ್‌ ಕೋಚ್‌ಗಳು ಹಾಗೂ ನೆರವು ಸಿಬ್ಬಂದಿ ಕೂಡ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ಶನಿವಾರ ಲಸಿಕೆಯನ್ನು ಸ್ವೀಕರಿಸಿದರು.

‘35 ಸ್ಪರ್ಧಿಗಳು, ಕೆಲವು ಕೋಚ್‌ಗಳು ಮತ್ತು ನೆರವು ಸಿಬ್ಬಂದಿ ಪುಣೆಯ ಎಎಸ್‌ಐನಲ್ಲಿ ಎರಡನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ‘ ಎಂದು ಭಾರತ ರೋಯಿಂಗ್ ಫೆಡರೇಷನ್‌ನ ಅಧ್ಯಕ್ಷ ರಾಜಲಕ್ಷ್ಮಿ ಸಿಂಗ್‌ ದೇವ್‌ ಭಾನುವಾರ ಹೇಳಿದ್ದಾರೆ.

ADVERTISEMENT

ಟೋಕಿಯೊದಲ್ಲಿ ಮೇ 5ರಿಂದ 7ರವರೆಗೆ ನಡೆಯಲಿರುವ ವಿಶ್ವ ರೋಯಿಂಗ್ ಏಷ್ಯಾ ಓಷೇನಿಯಾ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳೂ ಲಸಿಕೆ ತೆಗೆದುಕೊಂಡವರಲ್ಲಿ ಸೇರಿದ್ದಾರೆ.

ಆರ್ಚರಿ ಪಟುಗಳಿಗೆ ಮುಂದಿನ ವಾರ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.