ನವದೆಹಲಿ: ಭಾರತದ ಅನುಭವಿ ಆಟಗಾರ ಅಭಯ್ ಸಿಂಗ್ ಅವರು ಸಿಲಿಕಾನ್ ವ್ಯಾಲಿ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಶನಿವಾರ ಶುಭಾರಂಭ ಮಾಡಿದರು. ಆದರೆ, ವಿ. ಸೆಂಥಿಲ್‌ಕುಮಾರ್ ಹಾಗೂ ರಮಿತ್ ಟಂಡನ್ ಅವರು ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದರು.
ಅಮೆರಿಕದ ರೆಡ್‌ವುಡ್ ಸಿಟಿಯಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅಭಯ್ ಅವರು 3–0ಯಿಂದ (12–10, 11–7, 13–11) ಈಜಿಪ್ಟ್‌ನ ಕರೀಂ ಎಲ್ ಹಮಮಿ ಅವರನ್ನು ಮಣಿಸಿದರು.
ಅಭಯ್ ಅವರು 16ರ ಘಟ್ಟದಲ್ಲಿ ಐದನೇ ಶ್ರೇಯಾಂಕದ ವಿಕ್ಟರ್ ಕ್ರ್ಯೂನ್ (ಫ್ರಾನ್ಸ್) ಅವರ ಸವಾಲು ಎದುರಿಸಬೇಕಿದೆ.
ಆದರೆ, ಸೆಂಥಿಲ್‌ಕುಮಾರ್ ಅವರು 3–0ಯಿಂದ (3–11, 5–11, 9–11) ಈಜಿಪ್ಟ್‌ನ ಕರೀಂ ಎಲ್ ಟೊರ್ಕಿ ವಿರುದ್ಧ ಸೋತು ಅಭಿಯಾನ ಅಂತ್ಯಗೊಳಿಸಿದರು. ರಮಿತ್ ಅವರು ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 2–3ರಿಂದ (12–10, 5–11, 5–11, 11–9, 11–8) ಬ್ಯಾಲಝ್ಸ್ ಫರ್ಕಾಸ್ (ಹಂಗರಿ) ಎದುರು ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.