ಕೊಲಂಬೊ: ದಿಗ್ಗಜ ಪಂಕಜ್ ಅದ್ವಾನಿ ಮತ್ತು ವಿಶ್ವ 6–ರೆಡ್ ಸ್ನೂಕರ್ ಚಾಂಪಿಯನ್ ಕಮಲ್ ಚಾವ್ಲಾ ಅವರು ಭಾನುವಾರ ಆರಂಭವಾಗಲಿರುವ ಎಸಿಬಿಎಸ್ ಏಷ್ಯನ್ 6–ರೆಡ್ ಸ್ನೂಕರ್ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಟೀಮ್ ಸ್ನೂಕರ್ (15–ರೆಡ್) ಚಾಂಪಿಯನ್‌ಷಿಪ್ ನಲ್ಲಿ ಭಾರತದ ಸವಾಲನ್ನುಮುನ್ನಡೆಸಲಿದ್ದಾರೆ.
ಇವರಿಬ್ಬರಲ್ಲದೇ ಹಾಲಿ ರಾಷ್ಟ್ರೀಯ ಚಾಂಪಿಯನ್ ಪಾರಸ್ ಗುಪ್ತಾ ಮತ್ತು ಪುಷ್ಪೇಂದರ್ ಸಿಂಗ್ ಅವರೂ ಸ್ಪರ್ಧೆಯಲ್ಲಿದ್ದಾರೆ.
ಟೀಮ್ ಚಾಂಪಿಯನ್‌ಷಿಪ್ ವಿಭಾಗದಲ್ಲಿ ಪಂಕಜ್ ಅವರು ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಛಲದಲ್ಲಿದ್ದಾರೆ. ಅವರೊಂದಿಗೆ ಬ್ರಿಜೇಶ್ ದಮಾನಿ ಅವರು ತಂಡದಲ್ಲಿದ್ದಾರೆ. ಈ ತಂಡವು ಎರಡು ವರ್ಷಗಳ ಹಿಂದೆ ಇರಾನ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಇವರೊಂದಿಗೆ ವಿಶ್ವ ಗೇಮ್ಸ್ ಚಿನ್ನದ ಪದಕ ವಿಜೇತ ಆದಿತ್ಯ ಮೆಹ್ತಾ ಕೂಡ ಕಣದಲ್ಲಿದ್ದಾರೆ.
ಭಾರತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಪ್ರಕಟಿಸಿರುವ ತಂಡ ಇಂತಿದೆ;
ಏಷ್ಯನ್ 6–ರೆಡ್ ಸ್ನೂಕರ್(ಜೂನ್ 22–26): ಕಮಲ್ ಚಾವ್ಲಾ, ಪಾರಸ್ ಗುಪ್ತಾ, ಪುಷ್ಪೇಂದರ್ ಸಿಂಗ್.
15–ರೆಡ್ ಸ್ನೂಕರ್ ಟೀಮ್ (ಜೂನ್ 26–28): ಪಂಕಜ್ ಅದ್ವಾನಿ, ಬ್ರಿಜೇಶ್ ದಮಾನಿ, ಆದಿತ್ಯ ಮೆಹ್ತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.