ADVERTISEMENT

ವಿಶ್ವ ಸ್ನೂಕರ್‌: ಪಂಕಜ್‌ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 14:26 IST
Last Updated 2 ನವೆಂಬರ್ 2025, 14:26 IST
ಪಂಕಜ್‌ ಅಡ್ವಾನಿ
ಪಂಕಜ್‌ ಅಡ್ವಾನಿ   

ಬೆಂಗಳೂರು: ಮೂರು ಬಾರಿಯ ಚಾಂಪಿಯನ್‌ ಪಂಕಜ್‌ ಅಡ್ವಾಣಿ ಅವರು ದೋಹಾದಲ್ಲಿ ಸೋಮವಾರ ಆರಂಭವಾಗಲಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. 

ಪುರುಷರ ಸ್ಪರ್ಧೆಗಳು ಎರಡು ಹಂತಗಳಲ್ಲಿ (ನವೆಂಬರ್‌ 3ರಿಂದ 6ರ ವರೆಗೆ ಹಾಗೂ 7ರಿಂದ 13ರ ವರೆಗೆ) ನಡೆಯಲಿವೆ. ಉನ್ನತ ಶ್ರೇಯಾಂಕದ ಆಟಗಾರರು ನೇರವಾಗಿ ಎರಡನೇ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಮಹಿಳಾ ಸ್ಪರ್ಧೆಗಳು ಶುಕ್ರವಾರ ಆರಂಭವಾಗಲಿವೆ.

ಭಾರತ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಫೆಡರೇಷನ್ ಪ್ರಕಟಿಸಿರುವ ಪುರುಷರ ತಂಡ ಇಂತಿದೆ: ಪಂಕಜ್‌ ಅಡ್ವಾಣಿ, ಬ್ರಿಜೇಶ್‌ ದಮಾನಿ, ಪಾರಸ್‌ ಗು‍ಪ್ತಾ, ಧ್ವಜ್‌ ಹರಿಯಾ, ಮಲ್ಕೀತ್‌ ಸಿಂಗ್‌, ಮೊಹಮ್ಮದ್‌ ಹುಸೇನ್‌.

ADVERTISEMENT

ಮಹಿಳೆಯರು: ಅನುಪಮಾ ರಾಮಚಂದ್ರನ್‌, ಅಮೀ ಕಮಾನಿ, ಕೀರ್ತನಾ ಪಾಂಡ್ಯನ್‌, ನತಾಶಾ ಚೇತನ್‌, ಅನನ್ಯಾ ಪಟೇಲ್‌, ಶ್ರುತಿ ಎಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.