ಪಂಕಜ್ ಅಡ್ವಾಣಿ
ಮುಂಬೈ: ಭಾರತದ ಪಂಕಜ್ ಅಡ್ವಾಣಿ ಅವರು ಎನ್‌ಎಸ್‌ಸಿಐ ಬಾಲ್ಕ್‌ಲೈನ್ ಅಖಿಲ ಭಾರತ ಸ್ನೂಕರ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಕೇತನ್ ಚಾವ್ಲಾ ಅವರನ್ನು 7–1 ಅಂಕಗಳಿಂದ ಮಣಿಸಿದರು.
13 ಫ್ರೇಮ್‌ಗಳ ನಾಕೌಟ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಕೊನೆಯ ನಾಲ್ಕು ಫ್ರೇಮ್‌ಗಳನ್ನು 63, 82, 57 ಮತ್ತು 60 ಅಂಕಗಳಿಂದ ಗೆದ್ದರು.
ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಹಿಮಾನ್ಶು ಜೈನ್ ಎದುರಾಳಿ ದಿಗ್ವಿಜಯ್ ಕಾಡಿಯನ್ ಅವನ್ನು 7–2 ಅಂಕಗಳಿಂದ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಇಶ್‌ಪ್ರೀತ್ ಚಾಡಾ ಅವರು 7–2 ಅಂಕಗಳಿಂದ ಸೌರವ್ ಕೊಠಾರಿ ಅವರ ವಿರುದ್ಧ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.