ADVERTISEMENT

ಎಎಂಎಸ್‌ಸಿ ಡರ್ಟ್ ಫ್ರೀ-8 ರೇಸ್: ಚಿಕ್ಕಮಗಳೂರಿನ ಐಮನ್ ವೇಗದ ಚಾಲಕ

ಬೆಂಗಳೂರಿನ ರೂಪೇಶ್‌ಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 23:30 IST
Last Updated 16 ಫೆಬ್ರುವರಿ 2025, 23:30 IST
ರೇಸ್‌ನಲ್ಲಿ ಗುರಿಯತ್ತ ಮುನ್ನುಗ್ಗಿದ ಕಾರು
ರೇಸ್‌ನಲ್ಲಿ ಗುರಿಯತ್ತ ಮುನ್ನುಗ್ಗಿದ ಕಾರು   

ಮಂಗಳೂರು: ಎಸ್‌ಯುವಿ ಮುಕ್ತ ವಿಭಾಗವೂ ಸೇರಿದಂತೆ ಒಟ್ಟು ಆರು ಟ್ರೋಫಿ ತಮ್ಮದಾಗಿಸಿಕೊಂಡ ಚಿಕ್ಕಮಗಳೂರಿನ ಐಮನ್‌ ಅಹಮ್ಮದ್ ಅವರು ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ಎಎಂಎಸ್‌ಸಿ ಡರ್ಟ್ ಫ್ರೀ-8 ರೇಸ್‌ನ ವೇಗದ ಚಾಲಕ ಎನಿಸಿಕೊಂಡರು. 

ಮಾಂಡೊವಿ ಮೋಟರ್ಸ್, ವಾಮ್ಸಿ ಮೆರ್ಲ ಮತ್ತು ಶೂಲಿನ್ ಗ್ರೂಪ್ಸ್ ಸಹಯೋಗದಲ್ಲಿ ಮಂಗಳೂರು ಮೋಟರ್ ಸ್ಪೋರ್ಟ್ಸ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ರೇಸ್‌ನ ಎಸ್‌ಯುವಿ ಓಪನ್‌, ಅನ್‌ರಿಸ್ಟ್ರಿಕ್ಟೆಡ್‌ ಓಪನ್‌, ಎಎಂಎಸ್‌ಸಿ ಓಪನ್‌, ಪ್ರೊ 3000 ಸಿಸಿ, ಪ್ರೊ 1400 ಸಿಸಿ ಮತ್ತು 1100 ಸಿಸಿ ವಿಭಾಗಗಳಲ್ಲಿ ಐಮನ್‌ ಮೊದಲಿಗರಾದರು.

ಸ್ಟಾರ್ ಆಫ್ ಕರ್ನಾಟಕ ಸೇರಿದಂತೆ ಎರಡು ಟ್ರೋಫಿ ಮತ್ತು ಎರಡು ವಿಭಾಗದಲ್ಲಿ ರನ್ನರ್ ಅಪ್ ಆದ ಬೆಂಗಳೂರಿನ ರೂಪೇಶ್ ಬಿ.ಸಿ ಎರಡನೇ ವೇಗದ ಚಾಲಕ ಎನಿಸಿಕೊಂಡರು. ಕೇರಳದ ಅತುಲ್ ಥಾಮಸ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ADVERTISEMENT

ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿರ್ಮಿಸಿದ್ದ 1.5 ಕಿಲೊಮೀಟರ್‌ ಟ್ರ್ಯಾಕ್‌ನಲ್ಲಿ ಬಿರುಬಿಸಿಲಿನ ಹೊಡೆತ ಲೆಕ್ಕಿಸದೆ ದೂಳೆಬ್ಬಿಸುತ್ತ ಮುನ್ನುಗ್ಗಿದ ಐಮನ್ ಮೊದಲು ಸ್ಪರ್ಧಿಸಿದ್ದು ಎಎಂಎಸ್‌ಸಿ ಓಪನ್ ವಿಭಾಗದಲ್ಲಿ. 1 ನಿಮಿಷ 34.897 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ನಂತರ 1100 ಸಿಸಿ ವಿಭಾಗದಲ್ಲಿ 1ನಿ 40.296 ಸೆಕೆಂಡುಗಳಲ್ಲಿ ಗುರಿ ಸೇರಿದರು. 1650 ಸಿಸಿ ವಿಭಾಗದಲ್ಲಿ ರೂಪೇಶ್ ಅವರ ವೇಗವನ್ನು ಹಿಂದಿಕ್ಕಲು ಐಮನ್‌ಗೆ ಸಾಧ್ಯವಾಗಲಿಲ್ಲ. ರೂಪೇಶ್ 1ನಿ34.843 ಸೆಕೆಂಡುಗಳಲ್ಲಿ ಫಿನಿಷಿಂಗ್ ಪಾಯಿಂಟ್ ತಲುಪಿದರೆ ಐಮನ್‌ 1ನಿ35.378 ಸೆಕೆಂಡುಗಳನ್ನು ತೆಗೆದುಕೊಂಡರು. 

ಎಎಂಎಸ್‌ಸಿ ಮತ್ತು 1650 ಸಿಸಿ ವಿಭಾಗಗಳಲ್ಲಿ ಐಮನ್, ರೂಪೇಶ್ ಮತ್ತು ಅತುಲ್ ಅವರು ಪ್ರಮುಖ ಆಕರ್ಷಣೆಯಾಗಿದ್ದರು. ಎರಡೂ ವಿಭಾಗಗಳಲ್ಲಿ ಅತುಲ್ ಮೂರನೆಯವರಾದರು. 3000 ಸಿಸಿಯಲ್ಲೂ ಐಮನ್ ಚಾಂಪಿಯನ್ ಆದರೆ ಅತುಲ್‌ ಎರಡನೇ ಸ್ಥಾನ ಗಳಿಸಿದರು. ರೂಪೇಶ್‌ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. 

ಫಲಿತಾಂಶಗಳು

ಎಎಂಎಸ್‌ಸಿ ಓಪನ್‌: ಐಮನ್‌–1. ಕಾಲ:1ನಿ 34.897 ಸೆ, ರೂಪೇಶ್‌–2, ಅತುಲ್‌ ಥಾಮಸ್‌–3

ಎಸ್‌ಯುವಿ ಓಪನ್‌: ಐಮನ್‌–1. ಕಾಲ: 1ನಿ 47.856ಸೆ, ನಂದಕಿಶೋರ್‌–2, ಪ್ರದೀಪ್‌–3

ಅನ್‌ರೆಸ್ಟ್ರಿಕ್ಟೆಡ್ ಓಪನ್‌: ಐಮನ್‌–1. ಕಾಲ: 1ನಿ 34.192 ಸೆ, ರೂಪೇಶ್‌–2, ಅತುಲ್‌–3

ಸ್ಟಾರ್ ಆಫ್‌ ಕರ್ನಾಟಕ: ರೂಪೇಶ್‌–1. ಕಾಲ: 1ನಿ 34.571ಸೆ, ಐಮನ್‌–2, ವಿಕ್ರಂ ರಾವ್‌–3

ಪ್ರೊ 1100 ಸಿಸಿ: ಐಮನ್‌–1. ಕಾಲ: 1ನಿ 40.296 ಸೆ, ಪ್ರಕಾಶ್‌–2, ಅಜ್ವೀರ್‌–3

1650 ಸಿಸಿ: ರೂಪೇಶ್‌–1.ಕಾಲ: 1ನಿ 34.843ಸೆ, ಐಮನ್‌–2, ಅತುಲ್‌–3

800ಸಿಸಿ: ಪ್ರಕಾಶ್‌–1. ಕಾಲ: 1ನಿ 41.587ಸೆ, ಅಜ್ವೀರ್‌–2, ಲೋಕೇಶ್‌ ಜೈನ್‌–3

3000 ಸಿಸಿ: ಐಮನ್‌–1. ಕಾಲ: 1ನಿ 33.823 ಸೆ, ಅತುಲ್‌–2, ಅಶ್ವಿನ್‌–3

1400 ಸಿಸಿ: ಐಮನ್‌–1. ಕಾಲ: 1ನಿ 38.284ಸೆ, ಜೀಶನ್‌–2, ಅತುಲ್‌–3

ಅಮೆಚೂರ್ 1100 ಸಿಸಿ: ಅಜ್ವೀರ್–1. ಕಾಲ: 1ನಿ 44.220ಸೆ, ಲೋಕೇಶ್ ಜೈನ್‌–2, ತಹ್ಲಾ–3

1650ಸಿಸಿ: ಪೆಬಿ–1.ಕಾಲ: 1ನಿ42.013 ಸೆ, ಅರ್ಬಜ್ ಖಾನ್‌–2, ಅಶ್ವಿನ್ ಪುಗಳಗಿರಿ–3

1400ಸಿಸಿ: ಅರ್ಬಜ್‌ ಖಾನ್‌–1. ಕಾಲ: , ಹರ್ಷಿತ್–2, ಕಿಶೋರ್‌–3; 1ನಿ 42.271ಸೆ,

ಓಪನ್‌: ಹರ್ಷಿತ್–1.ಕಾಲ: 1ನಿ 40.717ಸೆ, ಫಜೀಲ್ ಅಹಮ್ಮದ್‌–2, ಅಜೀಮ್‌–3

3000 ಸಿಸಿ: ಮೊಹಮ್ಮದ್ ಅಜ್ವಾನ್‌–1.ಕಾಲ: 1ನಿ 46.589 ಸೆ, ಸಿರಾಜ್‌–2, ಅಜೀಮ್‌–3

ಸ್ಟ್ರೀಟ್‌ ಸ್ಟಾಕ್‌: ರಿಷಭ್‌–1. ಕಾಲ: 1ನಿ 49.737 ಸೆ, ಅಮರ್‌–2, ಆದಿಲ್‌–3

ಮಹಿಳಾ ವಿಭಾಗ

ಫೆಬಿ–1. ಕಾಲ: 1ನಿ 46.162 ಸೆ, ಅಶ್ರಫಿ–2, ಶಮೀನಾ–3

ಓಲ್ಡ್ ಮಾನ್ಸ್ಟರ್ಸ್‌: ಅಜೀಮ್‌–1. ಕಾಲ: 1ನಿ 40.218 ಸೆ, ಐಮನ್‌–2, ಅರ್ಬಜ್ ಖಾನ್‌–3

ಡೀಸೆಲ್‌ ಓಪನ್‌: ಫಜೀಲ್‌–1. ಕಾಲ: 1ನಿ 47.405ಸೆ, ಆದಿಲ್‌–2, ನಸೀರ್‌–3

ಜಿಪ್ಸಿ ಓಪನ್‌: ನಂದಕಿಶೋರ್‌–1. ಕಾಲ: 1ನಿ 46.876 ಸೆ, ಐಮನ್‌–2

ಕಿಂಗ್ ಆಫ್ ಕೋಸ್ಟ್‌: ಫಜೀಲ್ ಅಹಮ್ಮದ್‌–1. ಕಾಲ: 1ನಿ 39.878 ಸೆ, ಪವನ್ ಭಟ್‌–2, ತಹ್ಲಾ–3.     

ರೇಸ್‌ನಲ್ಲಿ ಗುರಿಯತ್ತ ಮುನ್ನುಗ್ಗಿದ ಕಾರು
ಟ್ರೋಫಿಯೊಂದಿಗೆ ಐಮನ್ ಅಹಮ್ಮದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.