ADVERTISEMENT

ಯುಎಇಯ ಜಿಪಿ ಅಕಾಡೆಮಿಗೆ ಕಾಶ್ಮೀರದ ಅತೀಕಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:55 IST
Last Updated 2 ಜೂನ್ 2025, 15:55 IST
ಅತೀಕಾ ಮೀರ್‌ –ಇನ್‌ಸ್ಟಾಗ್ರಾಂ ಚಿತ್ರ
ಅತೀಕಾ ಮೀರ್‌ –ಇನ್‌ಸ್ಟಾಗ್ರಾಂ ಚಿತ್ರ   

ದುಬೈ: ಕಾಶ್ಮೀರದ ಹತ್ತು ವರ್ಷ ವಯಸ್ಸಿನ ರೇಸಿಂಗ್ ಕ್ರೀಡಾಪಟು ಅತೀಕಾ ಮೀರ್‌, ಯುಎಇನ ಎ.ಕೆ.ಸಿ.ಇ.ಎಲ್‌ ಜಿ.ಪಿ ಅಕಾಡೆಮಿ ನಡೆಸಿಕೊಡುವ ವೃತ್ತಿಪರ ಮೋಟಾರ್‌ ಸ್ಪೋರ್ಟ್‌ ತರಬೇತಿಗೆ ಆಯ್ಕೆಯಾಗಿದ್ದಾಳೆ.

ಈ ಅಕಾಡೆಮಿಯು ಉತ್ತಮ ಮೋಟಾರ್‌ಸ್ಪೋರ್ಟ್‌ ತಂಡವನ್ನು ಹೊಂದಿದ್ದು, ಫಾರ್ಮುಲಾ 4, ಫಾರ್ಮುಲಾ 3 ಸೇರಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಅವರು ಭಾಗವಹಿಸಿದ್ದಾರೆ. 

‘ರೇಸಿಂಗ್‌ ನನಗೆ ಸರ್ವಸ್ವ. ಎ.ಕೆ.ಸಿ.ಇ.ಎಲ್‌ ಜಿ.ಪಿ ಅಕಾಡೆಮಿಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಬೇಕೆಂಬ ಕನಸು ನನಸಾಗಿದೆ. ಭವಿಷ್ಯದಲ್ಲಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಭಾಗವಹಿಸುತ್ತೇನೆಂಬ ದೃಢವಿಶ್ವಾಸವಿದೆ. ಅದಕ್ಕಾಗಿ ಕಷ್ಟಪಡಲು ಸಿದ್ಧಳಿದ್ದೇನೆ’ ಎಂದು ಅತೀಕಾ ಪ್ರತಿಕ್ರಿಯಿಸಿದ್ದಾಳೆ.

ADVERTISEMENT

ಹಲವು ಅಂತರರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ, ಭರವಸೆಯ ಪ್ರದರ್ಶನ ನೀಡಿರುವ ಅತೀಕಾ, ಫಾರ್ಮುಲಾ ಒನ್‌ ಅಕಾಡೆಮಿಯ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯ ರೇಸ್‌ಪಟು ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.