ADVERTISEMENT

ಅಥ್ಲಿಟ್ ಅಗ್ನೇಸ್ ಟಿರೊಪ್ ಹತ್ಯೆ

ರಾಯಿಟರ್ಸ್
Published 13 ಅಕ್ಟೋಬರ್ 2021, 19:31 IST
Last Updated 13 ಅಕ್ಟೋಬರ್ 2021, 19:31 IST

ನೈರೋಬಿ, ಕೆನ್ಯಾ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ವಿಜೇತ ಅಥ್ಲಿಟ್ ಅಗ್ನೇಸ್ ಟಿರೊಪ್ ಅವರನ್ನು ಕೊಲೆ ಮಾಡಲಾಗಿದೆ.

ಅಗ್ನೇಸ್ ಅವರ ಮನೆಯಲ್ಲಿಯೇ ದುರ್ಘಟನೆ ನಡೆದಿದೆ. 25 ವರ್ಷದ ಆಗ್ನೇಸ್ ಅವರನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಅವರ ಪತಿಯೇ ಈ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಅಥ್ಲೆಟಿಕ್ಸ್ ಕೆನ್ಯಾ ಬುಧವಾರ ತಿಳಿಸಿದೆ.

ಆಗ್ನೇಸ್ ಅವರು ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 5000 ಮೀಟರ್ಸ್ ಓಟದಲ್ಲಿ ಕೆನ್ಯಾ ದೇಶವನ್ನು ಪ್ರತಿನಿಧಿಸಿದ್ದರು. ನಾಲ್ಕನೇ ಸ್ಥಾನಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.