ADVERTISEMENT

‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 19:54 IST
Last Updated 10 ಡಿಸೆಂಬರ್ 2025, 19:54 IST
.
.   

ಬೆಂಗಳೂರು: ಭಾರತದ ಪ್ರತಿಷ್ಠಿತ ಡೇರಿ ಉತ್ಪನ್ನಗಳ ಬ್ರ್ಯಾಂಡ್ ಅಮುಲ್, ಅರ್ಜೆಂಟೀನಾ ಫುಟ್‌ಬಾಲ್‌ ತಂಡದೊಂದಿಗಿನ ಅಧಿಕೃತ ಪ್ರಾದೇಶಿಕ ಪಾಲುದಾರಿಕೆಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದೆ. ಫಿಫಾ ಫುಟ್‌ಬಾಲ್‌ ವಿಶ್ವಕಪ್‌ 2026ರ ವರೆಗೆ ಈ ಪಾಲುದಾರಿಕೆ ಇರಲಿದೆ.

‘ಫುಟ್‌ಬಾಲ್‌ ಆಟದಂತೆಯೇ ಅಮುಲ್‌ ಕೂಡ ಗಡಿಯಾಚೆಗಿನ ಹೃದಯಗಳನ್ನು ಬೆಸೆಯುತ್ತದೆ. 2022ರ ವಿಶ್ವ ಚಾಂಪಿಯನ್‌ ಅರ್ಜೆಂಟೀನಾ ತಂಡದೊಂದಿಗೆ ಪಾಲುದಾರಿಕೆಯನ್ನು ಮುಂದುವರಿಸುತ್ತಿರುವುದು ಸಂತಸದ ವಿಚಾರ’ ಎಂದು ಅಮುಲ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಜಯನ್‌ ಮೆಹ್ತಾ ಹೇಳಿದರು.

ಅಮುಲ್‌ ಸಂಸ್ಥೆಯು ಅರ್ಜೆಂಟೀನಾ ಫುಟ್‌ಬಾಲ್‌ ಅಸೋಸಿಯೇಷನ್‌ ಜೊತೆಗೆ 2022ರಿಂದಲೂ ಪ್ರಾದೇಶಿಕ ಪಾಲುದಾರಿಕೆಯನ್ನು ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.