ಷಿಕಾಗೊ: ಭಾರತದ ಯುವ ಸ್ಕ್ವಾಷ್ ತಾರೆ ಅನಾಹತ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ 28ನೇ ರ‍್ಯಾಂಕ್‌ನ ಮರೀನಾ ಸ್ಟೆಫಾನೋನಿ ಅವರಿಗೆ ಆಘಾತ ನೀಡಿ ಶುಭಾರಂಭ ಮಾಡಿದರು.
17 ವರ್ಷ ವಯಸ್ಸಿನ ಅನಾಹತ್ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ 10-12, 11-9, 6-11, 11-6, 11-6ರಿಂದ ಅಮೆರಿಕದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು.
ವಿಶ್ವದ 62ನೇ ಕ್ರಮಾಂಕದ ಅನಾಹತ್ ಅವರಿಗೆ ಎರಡನೇ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ವಿಶ್ವದ 15ನೇ ರ‍್ಯಾಂಕ್‌ನ ಫೈರೋಜ್ ಅಬೊಯೆಲ್‌ಖೈರ್ (ಈಜಿಪ್ಟ್) ಅವರೊಂದಿಗೆ ಮುಖಾಮುಖಿಯಾಗುವರು.
ಭಾರತದ ಯುವ ಆಟಗಾರ ಅಭಯ್ ಸಿಂಗ್ ಕೂಡ ಗೆಲುವಿನ ಅಭಿಯಾನ ಆರಂಭಿಸಿದರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅವರು 11-7, 2-11, 11-7, 11-6 ರಿಂದ ವಿಶ್ವದ 25ನೇ ರ‍್ಯಾಂಕ್‌ನ ನಿಕೋಲಸ್ ಮುಲ್ಲರ್ (ಸ್ವಿಟ್ಜರ್ಲೆಂಡ್) ಅವರನ್ನು ಸೋಲಿಸಿದರು.
38ನೇ ಶ್ರೇಯಾಂಕದ ಅಭಯ್ ಅವರ ಮುಂದಿನ ಎದುರಾಳಿ ಈಜಿಪ್ಟ್‌ನವರೇ ಆದ ಯೂಸೆಫ್ ಇಬ್ರಾಹಿಂ. ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿದ್ದಾರೆ.
ಟೂರ್ನಿಯು ಒಟ್ಟು ₹5.60 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.