
ನವದೆಹಲಿ: ಭಾರತದ ಉದಯೋನ್ಮುಖ ತಾರೆ ಅನಾಹತ್ ಸಿಂಗ್ ಅವರು ವಾಷಿಂಗ್ಟನ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಸ್ಕ್ವಾಷ್ ಆನ್ ಫೈರ್ ಓಪನ್ ಟೂರ್ನಿಯ ಕಿರೀಟ ತಮ್ಮದಾಗಿಸಿಕೊಂಡರು. ಈ ಹಾದಿಯಲ್ಲಿ ಅವರು 12–10, 11–5, 11–7ರಿಂದ ಅಗ್ರ ಶ್ರೇಯಾಂಕದ ಆಟಗಾರ್ತಿ, ಇಂಗ್ಲೆಂಡ್‌ನ ಜಾರ್ಜಿನಾ ಕೆನಡಿ ಅವರಿಗೆ ಆಘಾತ ನೀಡಿದರು.
ಪಿಎಸ್‌ಎ ಕಂಚಿನ ಪದಕ ಮಟ್ಟದ ಟೂರ್ನಿಯಲ್ಲಿ ಅನಾಹತ್ ಅವರಿಗೆ ಇದು ಚೊಚ್ಚಲ ಪ್ರಶಸ್ತಿಯಾಗಿದೆ.
ದೆಹಲಿಯ 17 ವರ್ಷ ವಯಸ್ಸಿನ ಆಟಗಾರ್ತಿ ಪಿಎಸ್‌ಎ ಟೂರ್ ಮಟ್ಟದ 26 ಟೂರ್ನಿಗಳಲ್ಲಿ ಈವರೆಗೆ ಭಾಗವಹಿಸಿದ್ದು, 15ರಲ್ಲಿ ಚಾಂಪಿಯನ್ ಆಗಿದ್ದಾರೆ. ಅದರೊಂದಿಗೆ ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನ ಪಡೆದಿದ್ದಾರೆ.
ಭಾರತದ ಆಟಗಾರ್ತಿ ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸನಾ ಇಬ್ರಾಹಿಂ (ಈಜಿಪ್ಟ್) ಅವರಿಗೆ ಹಾಗೂ ನಾಲ್ಕರ ಘಟ್ಟದಲ್ಲಿ ಅಮೆರಿಕದ ಸಬ್ರಿನಾ ಸೋಭಿ ಅವರಿಗೆ ಆಘಾತ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.