ADVERTISEMENT

ಇಂಡಿಯನ್ ಗ್ರ್ಯಾನ್‌ಪ್ರಿ 2: ಅನಿಮೇಶ್ ಕುಜುರ್ ವೇಗದ ಓಟಗಾರ

ಪಿಟಿಐ
Published 18 ಮೇ 2025, 0:17 IST
Last Updated 18 ಮೇ 2025, 0:17 IST
ಅನಿಮೇಶ್ ಕುಜುರ್
ಅನಿಮೇಶ್ ಕುಜುರ್   

ತಿರುವನಂತಪುರ: ಒಡಿಶಾದ ಅನಿಮೇಶ್ ಕುಜುರ್ ಅವರು ಶನಿವಾರ ಇಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿ 2 ಕೂಟದಲ್ಲಿ ಪುರುಷರ 100 ಮೀಟರ್‌ ಮತ್ತು 200 ಮೀಟರ್‌ ಓಟದಲ್ಲಿ ಚಿನ್ನ ಗೆದ್ದು, ವೇಗದ ಓಟಗಾರನಾಗಿ ಹೊರಹೊಮ್ಮಿದರು.

21 ವರ್ಷ ವಯಸ್ಸಿನ ಕುಜುರ್‌ 100 ಮೀ. (ರೇಸ್‌ ಎ) ಗುರಿಯನ್ನು 10.31 ಸೆಕೆಂಡುಗಳಲ್ಲಿ ತಲುಪಿದರು. 200 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ (20.40ಸೆ) ಹೊಂದಿರುವ ಅವರು (ರೇಸ್‌ ಡಿ) 20.55 ಸೆಕೆಂಡುಗಳಲ್ಲಿ ಗುರಿ ತಲುಪಿ ಡಬಲ್‌ ಚಿನ್ನ ಗೆದ್ದರು. 

ಕರ್ನಾಟಕದ ಧನುಷ್ ಕೆ. (10.90ಸೆ) ಮತ್ತು ಆರ್ಯನ್ ಮನೋಜ್ (10.79ಸೆ) ಅವರು ಕ್ರಮವಾಗಿ ಪುರುಷರ 100 ಮೀ ರೇಸ್ ಬಿ ಮತ್ತು ರೇಸ್ ಸಿ ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ನಿಖಿಲ್ ಎಸ್. ಪುರುಷರ 400 ಮೀ (ರೇಸ್ ಎ) ನಲ್ಲಿ ಕಂಚಿನ ಪದಕ ಗೆದ್ದರು.

ADVERTISEMENT

ಫಲಿತಾಂಶ: ಪುರುಷರು: 100 ಮೀ (ರೇಸ್‌ ಎ): ಅನಿಮೇಶ್‌ ಕುಜುರ್‌ (ಒಡಿಶಾ, 10.31ಸೆ)–1, ಲಾಲು ಪ್ರಸಾದ್ ಭೋಯಿ (ಒಡಿಶಾ)–2, ದೊಂಡಪತಿ ಎಂ. (ಒಡಿಶಾ)–3. ರೇಸ್‌ ಬಿ: ಮೊಹಮ್ಮದ್‌ ಎಚ್‌. (ಕೇರಳ, 10.83ಸೆ)–1, ಧನುಷ್‌ ಕೆ. (ಕರ್ನಾಟಕ)–2, ಧೀರಜ್‌ ಕೆ (ಆರ್ಮಿ)–3. ರೇಸ್‌ ಸಿ: ಅಭಿನಾಶ್‌ ಸಾಹು (ಒಡಿಶಾ, 10.74ಸೆ)–1, ಆರ್ಯನ್‌ ಮನೋಜ್‌ (ಕರ್ನಾಟಕ)–2, ಅಜಿನ್‌ ಆರ್‌ (ಕೇರಳ)–3

200 ಮೀ. (ರೇಸ್‌ ಡಿ): ಅನಿಮೇಶ್‌ ಕುಜುರ್‌ (20.55ಸೆ)–1, ವಿಶಾಲ್‌ ಟಿ.ಕೆ. (ಎನ್‌ಸಿಒಇ ತಿರುವನಂತಪುರ)–2, ರಾಗುಲ್‌ ಕುಮಾರ್ ಜಿ (ತಮಿಳುನಾಡು)–3. 400 ಮೀ (ರೇಸ್‌ ಎ): ನವಪ್ರೀತ್ ಸಿಂಗ್ (ದೆಹಲಿ, 48.69ಸೆ)–1, ಸಜ್ಜನ್‌ ಮಿಶ್ರಾ (ಆರ್ಮಿ)–2, ನಿಖಿಲ್‌ ಎಸ್‌ (ಕರ್ನಾಟಕ)–3.

ಮಹಿಳೆಯರು: 100 ಮೀ (ರೇಸ್‌ ಎ): ಶತಾಕ್ಷಿ ರೈ (ಬಿಹಾರ್‌, 11.91ಸೆ)–1, ಕೀರ್ತನಾ ಎಸ್‌. (ಕರ್ನಾಟಕ)–2, ಪ್ರಿಯಾ ಚೌಹಾಣ್ (ದೆಹಲಿ)–3. (ರೇಸ್‌ ಬಿ): ಅಭಿನಯಾ ರಾಜರಾಜನ್ (ಎನ್‌ಸಿಒಇ ತಿರುವನಂತಪುರ, 11.55ಸೆ)–1, ಸ್ನೇಹಾ ಎಸ್.ಎಸ್‌. (ಕರ್ನಾಟಕ)–2, ನಿತ್ಯ ಗಂಧೆ (ತೆಲಂಗಾಣ)–3. 800 ಮೀ: ಲಕ್ಷ್ಮಿಪ್ರಿಯಾ ಎ. ಕಿಸಾನ್ (ಒಡಿಶಾ, 2ನಿ.09.10ಸೆ)–1, ವಿಜಯಕುಮಾರಿ ಜಿ.ಕೆ (ಕರ್ನಾಟಕ)–2, ಪ್ರಿಸ್ಸಿಲ್ಲಾ ಡೇನಿಯಲ್ (ಎನ್‌ಸಿಒಇ ತಿರುವನಂತಪುರ)–3. 400 ಮೀ. ಹರ್ಡಲ್ಸ್‌: ವಿದ್ಯಾ ರಾಮರಾಜ್‌ (ತಮಿಳುನಾಡು, 57.45ಸೆ)–1, ಅನು ಆರ್‌. (ಕೇರಳ)–2, ದೀಕ್ಷಿತಾ ಆರ್‌. (ಕರ್ನಾಟಕ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.