ADVERTISEMENT

ಶೂಟಿಂಗ್‌: ಅಂಜುಮ್‌ ಮೌದ್ಗಿಲ್‌ಗೆ ಚಿನ್ನ

ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌

ಪಿಟಿಐ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
ಅಂಜುಮ್‌ ಮೌದ್ಗಿಲ್‌– ಪಿಟಿಐ ಚಿತ್ರ
ಅಂಜುಮ್‌ ಮೌದ್ಗಿಲ್‌– ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್‌ನ ಅಂಜುಮ್‌ ಮೌದ್ಗಿಲ್‌ ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿಸೋಮವಾರ ವಿಶ್ವದಾಖಲೆಗಿಂತ ಹೆಚ್ಚಿನ ಪಾಯಿಂಟ್‌ಗಳಿಗೆ ಗುರಿಯಿಟ್ಟು ಚಿನ್ನ ಗೆದ್ದರು.

ಕರ್ಣಿ ಸಿಂಗ್‌ ರೇಂಜ್‌ನಲ್ಲಿ ನಡೆದ 12ನೇ ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಮಾಸ್ಟರ್ಸ್ ಶೂಟಿಂಗ್‌ ಸ್ಪರ್ಧೆಯಲ್ಲಿ ಅವರು ಈ ಸಾಮರ್ಥ್ಯ ತೋರಿದರು.

ಫೈನಲ್ಸ್‌ನಲ್ಲಿ ಅವರು 253.9 ಪಾಯಿಂಟ್‌ ಗಳಿಸಿದರು. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ ಹಂತದ ಸ್ಪರ್ಧೆಯಲ್ಲಿ ಸಹ ಶೂಟರ್‌ ಹಾಗೂ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಅಪೂರ್ವಿ ಚಾಂಡೇಲ 252.9 ಪಾಯಿಂಟ್‌ ಗಳಿಸಿದ್ದು ವಿಶ್ವದಾಖಲೆಯಾಗಿದೆ.

ADVERTISEMENT

ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಅಂಜುಮ್‌ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಈಗಾಗಲೇ ಟೋಕಿಯೊ ಒಲಿಂಪಿಕ್‌ ಟಿಕೆಟ್‌ ಖಚಿತಪಡಿಸಿದ್ದಾರೆ.

ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಮೆಹುಲಿ ಘೋಷ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಅಪೂರ್ವಿ ಅವರ ದಾಖಲೆ ಸ್ಕೋರ್‌ಗಿಂತ ಕೇವಲ 0.7 ಕಡಿಮೆ ಪಾಯಿಂಟ್‌ಗಳಿಗೆ ಮೆಹುಲಿ ಗುರಿಯಿಟ್ಟರು. ಆದರೆ ಜೂನಿಯರ್‌ ಮಹಿಳಾ ವಿಭಾಗದಲ್ಲಿ 253 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆಯುವಲ್ಲಿ ಅವರು ಯಶಸ್ವಿಯಾದರು.

ಈ ವಿಭಾಗದ ಬೆಳ್ಳಿ ತಮಿಳುನಾಡಿನ ಎಲವೆನಿಲಾ ವಲಾರಿವನ್‌ ಪಾಲಾಯಿತು. ಏರ್‌ಪೋರ್ಸ್ ತಂಡದ ರವಿಕುಮಾರ್‌, ಪುರುಷರ 10 ಮೀಟರ್‌ ಏರ್‌ ರೈಫಲ್‌ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.