ADVERTISEMENT

ಕುಸ್ತಿ ಟ್ರಯಲ್ಸ್‌ನಲ್ಲಿ ಮಿಂಚಿದ ಅಂತಿಮ್ ಪಂಘಲ್‌

ಪಿಟಿಐ
Published 25 ಆಗಸ್ಟ್ 2023, 20:11 IST
Last Updated 25 ಆಗಸ್ಟ್ 2023, 20:11 IST
ಭಾರತ ಕುಸ್ತಿ ಫೆಡರೇಷನ್‌
ಭಾರತ ಕುಸ್ತಿ ಫೆಡರೇಷನ್‌   

ಪಟಿಯಾಲ: ಭಾರತದ ಯುವ ಕುಸ್ತಿಪಟು ಅಂತಿಮ್‌ ಪಂಘಲ್‌ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ಇಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ ಗಮನ ಸೆಳೆದರು.

ಶುಕ್ರವಾರ ನಡೆದ ಮಹಿಳೆಯರ 53 ಕೆ.ಜಿ. ವಿಭಾಗದ ಟ್ರಯಲ್ಸ್‌ನಲ್ಲಿ ಅವರು ಅಗ್ರಸ್ಥಾನ ಪಡೆದರು. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಮಂಜು, ಪೂಜಾ ಮತ್ತು ರಜಿನಿ ಅವರನ್ನು ಮಣಿಸಿದ ಅಂತಿಮ್‌ ಅವರು ಬೆಲ್‌ಗ್ರೇಡ್‌ನಲ್ಲಿ ಸೆ.16 ರಿಂದ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡರು.

ಅಂತಿಮ್‌ ಅವರು ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಚಿನ್ನ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಗೌರವ ತಮ್ಮದಾಗಿಸಿಕೊಂಡಿದ್ದರು. ಜೋರ್ಡನ್‌ನ ಅಮ್ಮಾನ್‌ನಲ್ಲಿ ಈಚೆಗೆ ನಡೆದಿದ್ದ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಅನ್ನು ಗೆದ್ದುಕೊಂಡಿದ್ದರು.

ADVERTISEMENT

ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದ ದಿವ್ಯಾ ಕಾಕರನ್‌ ಮತ್ತು ಸರಿತಾ ಮೋರ್‌ ಅವರು ‍ಪುಟಿದೆದ್ದು ನಿಂತು, ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹಗೆ ಗಿಟ್ಟಿಸಿಕೊಂಡರು. ಸರಿತಾ ಅವರು 57 ಕೆ.ಜಿ. ಮತ್ತು ದಿವ್ಯಾ ಅವರು 76 ಕೆ.ಜಿ. ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ತಮ್ಮನ್ನು ಸೋಲಿಸಿದ್ದ ರೈಲ್ವೆಯ ಕಿರಣ್‌ ಅವರನ್ನು ಸೋಲಿಸುವ ಮೂಲಕ ಕಾಕರನ್, ಮುಯ್ಯಿ ತೀರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.