ADVERTISEMENT

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್: ಕಂಚು ಗೆದ್ದ ಆದಿತ್ಯ ಕುಂದು, ಆಶು

ಜ್ಞಾನೇಂದರ್‌ಗೆ ನಿರಾಸೆ

ಪಿಟಿಐ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ಆಶು (ನೀಲಿ ಪೋಷಾಕು)– ಅಬ್ದುಲ್‌ ಕರೀಮ್‌ ನಡುವಿನ ಸೆಣಸಾಟ–ಪಿಟಿಐ ಚಿತ್ರ
ಆಶು (ನೀಲಿ ಪೋಷಾಕು)– ಅಬ್ದುಲ್‌ ಕರೀಮ್‌ ನಡುವಿನ ಸೆಣಸಾಟ–ಪಿಟಿಐ ಚಿತ್ರ   

ನವದೆಹಲಿ: ಗ್ರೀಕೊ ರೋಮನ್‌67 ಕೆಜಿ ವಿಭಾಗದಲ್ಲಿ ಕಣಕ್ಕಿದ ಆಶು ಕಂಚಿನ ಪದಕದ ಸುತ್ತಿನ ಹಣಾಹಣಿಯಲ್ಲಿ ಸಿರಿಯಾದ ಅಬ್ದುಲ್‌ ಕರೀಮ್‌ ಅಲ್‌ ಹಸನ್‌ ಅವರನ್ನು 8–1ರಿಂದ ಮಣಿಸಿದರೆ, ಕುಂದು 72 ಕೆಜಿ ವಿಭಾಗದಲ್ಲಿ 8–0 ಅಂತರದಿಂದ ಜಪಾನ್‌ನ ನವೊ ಕುಸಾಕ ಎದುರು ಗೆಲುವು ಸಾಧಿಸಿದರು.

ಕೆ.ಡಿ.ಜಾಧವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ ಷಿಪ್‌ನಲ್ಲಿ ಭಾರತಕ್ಕೆ ಒಟ್ಟು ನಾಲ್ಕು ಪದಕಗಳು ಲಭಿಸಿವೆ. ಮಂಗಳವಾರ ಸುನಿಲ್‌ಕುಮಾರ್‌ ಚಿನ್ನದ ಪದಕ, ಕರ್ನಾಟಕದ ಅರ್ಜುನ್‌ ಹಲಕುರ್ಕಿ ಕಂಚಿನ ಪದಕ ಗಳಿಸಿದ್ದರು.

ಬುಧವಾರ ನಡೆದ ಗ್ರೀಕೊ ರೋಮನ್ 60 ಕೆಜಿ ವಿಭಾಗದ ಹಣಾಹಣಿಯಲ್ಲಿ ಜ್ಞಾನೇಂದರ್‌ ನಿರಾಸೆಗೆ ಒಳಗಾದರು. ಕಂಚಿನ ಪದ ಕದ ಸುತ್ತಿನಲ್ಲಿ ಜಪಾನ್‌ನ ಕೆನಿಚಿರೊ ಫುಮಿಟಾ ಎದುರು ನಿರಾಸೆ ಕಂಡರು.ಕ್ವಾರ್ಟರ್‌ ಫೈನಲ್‌ನಲ್ಲಿ ಆದಿತ್ಯ ತಜಕಿಸ್ತಾನದ ಲೊಯಿಕಿ ಅಮೀರ್‌ ಕೊಂಜೊಡಾ ಎದುರು 9–0ಯಿಂದ, ಆಶು ಅವರು ಚೀನಾ ತೈಪೆಯ ಫು ಹಾವೊ ಲಿನ್‌ ಎದುರು 10–0 ಅಂತರದಿಂದ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.