ADVERTISEMENT

ಕರ್ನಾಟಕದ ಅಥ್ಲೀಟ್ ಪೂವಮ್ಮಗೆ ಎರಡು ವರ್ಷ ನಿಷೇಧ

ಪಿಟಿಐ
Published 20 ಸೆಪ್ಟೆಂಬರ್ 2022, 1:59 IST
Last Updated 20 ಸೆಪ್ಟೆಂಬರ್ 2022, 1:59 IST
ಎಂ.ಆರ್. ಪೂವಮ್ಮ
ಎಂ.ಆರ್. ಪೂವಮ್ಮ   

ನವದೆಹಲಿ:ಕರ್ನಾಟಕದ ಅಥ್ಲೀಟ್‌ ಎಂ.ಆರ್. ಪೂವಮ್ಮ ಅವರಿಗೆ ಆ್ಯಂಟಿಡೋಪಿಂಗ್ ಅಪೀಲ್ ಪ್ಯಾನಲ್‌ (ಎಡಿಎಪಿ) ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.

32 ವರ್ಷದ ಪೂವಮ್ಮಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಪರೀಕ್ಷೆಗೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್‌ಹೆಕ್ಸಾನೀಮೈನ್ ಮದ್ದಿನ ಅಂಶ ಇರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಈ ವರ್ಷದ ಜೂನ್‌ನಲ್ಲಿ ಅವರಿಗೆ ಎಡಿಡಿಪಿ ಮೂರು ತಿಂಗಳ ನಿಷೇಧ ಶಿಕ್ಷೆ ವಿಧಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಎಡಿಎಪಿ ಶಿಕ್ಷೆಯನ್ನು ಎರಡು ವರ್ಷಕ್ಕೆ ವಿಸ್ತರಿಸಿದೆ.

ADVERTISEMENT

‘ಪೂವಮ್ಮ ಅವರಿಂದ ಪರೀಕ್ಷೆಗಾಗಿ 2021ರ ಫೆಬ್ರುವರಿ 18ರಂದು ಮಾದರಿ ಸಂಗ್ರಹಿಸಲಾಗಿತ್ತು. ಅಂದಿನಿಂದ ಅವರು ಸ್ಪರ್ಧಿಸಿದ್ದ ಎಲ್ಲ ಫಲಿತಾಂಶಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಗೆದ್ದ ಪದಕಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಡಿಎಪಿ ಮುಖ್ಯಸ್ಥ ಅಭಿನವ್ ಮುಖರ್ಜಿ ಇದೇ 16ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

2018ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4X400 ಮೀ ರಿಲೆಯಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿಪೂವಮ್ಮಇದ್ದರು. 2012ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.