ಓಟ
ಗುಮಿ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 4x400 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಭಾರತ ಫೈನಲ್‌ಗೆ ಪ್ರವೇಶಿಸಿದೆ.
ರಿನ್ಸ್ ಜೋಸೆಫ್, ಧರ್ಮವೀರ್ ಚೌಧರಿ, ಮನು ತೆಕ್ಕಿನಾಲಿಲ್ ಸಾಜಿ ಮತ್ತು ಮೋಹಿತ್ ಕುಮಾರ್ ಅವರನ್ನೊಳಗೊಂಡ ಭಾರತ ತಂಡವು 3 ನಿಮಿಷ 06.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.
ಚೀನಾ (3:06.79) ಹಾಗೂ ಕೊರಿಯಾ ಸ್ಪರ್ಧಿಗಳನ್ನು ಹಿಂದಿಕ್ಕಿದ ಭಾರತ ನೇರ ಅರ್ಹತೆಯನ್ನು ಗಿಟ್ಟಿಸಿಕೊಂಡಿತು.
ಫೈನಲ್ ರೇಸ್‌ನಲ್ಲಿ ಭಾರತಕ್ಕೆ ಶ್ರೀಲಂಕಾ, ಚೀನಾ ಹಾಗೂ ಕಜಕಿಸ್ತಾನದ ಕಠಿಣ ಸವಾಲು ಎದುರಾಗಲಿದೆ. ಈ ಪೈಕಿ ಶ್ರೀಲಂಕಾ ಋತುವಿನ (3:01.56) ಶ್ರೇಷ್ಠ ಸಾಧನೆ ಹೊಂದಿದೆ.
ಮಹಿಳೆಯರ 10 ಸಾವಿರ ಮೀ. ಫೈನಲ್‌ನಲ್ಲಿ ಭಾರತದ ಸಂಜೀವನಿ ಜಾಧವ್ 33 ನಿಮಿಷ 08.17 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಐದನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಋತುವಿನ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇದೇ ವಿಭಾಗದಲ್ಲಿ ಭಾರತದವರೇ ಆದ ಸೀಮಾ ಆರನೇ ಸ್ಥಾನ (33:08.23) ಗಳಿಸಿದ್ದಾರೆ.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಸೇರಿದಂತೆ ಭಾರತ ಒಟ್ಟು ಎಂಟು ಪದಕಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.