ADVERTISEMENT

Asian Games: ಎಂಟರ ಘಟ್ಟಕ್ಕೆ ಅರ್ಹತೆ ಪಡೆದ ಭಾರತ

3x3 ಬ್ಯಾಸ್ಕೆಟ್‌ಬಾಲ್‌

ಪಿಟಿಐ
Published 27 ಸೆಪ್ಟೆಂಬರ್ 2023, 13:32 IST
Last Updated 27 ಸೆಪ್ಟೆಂಬರ್ 2023, 13:32 IST

ಹಾಂಗ್‌ಝೌ: ಭಾರತ ಪುರುಷರ 3x3 ಬ್ಯಾಸ್ಕೆಟ್‌ಬಾಲ್‌ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದು, ಬುಧವಾರ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಮಕಾವೊ ತಂಡವನ್ನು 21–12 ಪಾಯಿಂಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಸ್ಥಾನ ಖಚಿತಪಡಿಸಿಕೊಂಡಿತು.

ಸಹೇಜ್ ಪ್ರತಾಪ್ ಸಿಂಗ್ ಸೆಖೊನ್ ಅವರು 10 ಪಾಯಿಂಟ್ಸ್‌ ಕಲೆಹಾಕಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಮೊದಲ ದಿನ ಮಲೇಷ್ಯಾ ತಂಡವನ್ನು 20–16 ರಿಂದ ಸೋಲಿಸಿತ್ತು.

ಭಾರತ ಕೊನೆಯ ಲೀಗ್‌ ಪಂದ್ಯದಲ್ಲಿ ಕಳೆದ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ ಚೀನಾ ತಂಡವನ್ನು ಶುಕ್ರವಾರ ಎದುರಿಸಲಿದೆ. ಭಾರತ ಮಹಿಳಾ ತಂಡವೂ ಅದೇ ದಿನ ಆತಿಥೇಯ ತಂಡವನ್ನೇ ಎದುರಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.