ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಪದಕ ನಿರೀಕ್ಷೆಯಲ್ಲಿ ಭಾರತ

ಚೀನಾದ ಕ್ಸಿಯಾನ್‌ನಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 17:16 IST
Last Updated 22 ಏಪ್ರಿಲ್ 2019, 17:16 IST
ಭಜರಂಗ್‌ ಪೂನಿಯಾ
ಭಜರಂಗ್‌ ಪೂನಿಯಾ   

ಕ್ಸಿಯಾನ್:ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅಧಿಕ ಪದಕ ಗಳಿಸುವ ನಿರೀಕ್ಷೆಯೊಂದಿಗೆ ಭಾರತ ತಂಡ ಚೀನಾದ ಕ್ಸಿಯಾನ್‌ಗೆ ತೆರಳಿದೆ.

ಮಂಗಳವಾರ ಚಾಂಪಿಯನ್‌ಷಿಪ್‌ ಆರಂಭವಾಗಲಿದ್ದು, ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್‌ ಮಹಿಳೆಯರ ವಿಭಾಗದ ಮತ್ತು ಅಗ್ರ ಕ್ರಮಾಂಕದ ಬಜರಂಗ್‌ ಪೂನಿಯಾ ಪುರುಷರ ತಂಡದ ನೇತೃತ್ವ ವಹಿಸಿದ್ದಾರೆ.

ಸಾಕ್ಷಿ, ಬಜರಂಗ್‌ ಮತ್ತು ವಿನೇಶ್ ಪೋಗಟ್‌ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ. ಕಳೆದ ತಿಂಗಳು ಬಲ್ಗೇರಿಯಾದಲ್ಲಿ ನಡೆದಿದ್ದ ಕೊಲಾವ್‌ ನಿಕೊಲಾ ಟೂರ್ನಿಯಲ್ಲಿ ಬೆಳ್ಳಿ ಜಯಿಸಿದ್ದ ವಿನೇಶಾ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಆ ಟೂರ್ನಿಯಲ್ಲಿ ಬಜರಂಗ್‌ ಚಿನ್ನ ಗೆದ್ದು ವಿಶ್ವದ ನಂ.1 ಸ್ಥಾನ ಪಡೆದಿದ್ದರು.

ADVERTISEMENT

ಸಾಕ್ಷಿ ಮಲಿಕ್‌ ತಂಡದ ಭರವಸೆಯಾಗಿದ್ದು, 62 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಲಿಂಪಿಕ್‌ನಲ್ಲಿ ಕಂಚು ಜಯಿಸಿದ್ದ ಅವರು ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ದಿವ್ಯಾ ಕಕ್ರಾನ್ ಅವರು ಮಣಿಕಟ್ಟಿನ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಅವರು 68 ಕೆ.ಜಿ ವಿಭಾಗದಲ್ಲಿ ಸೆಣಸಲಿದ್ದಾರೆ.

ಪುರುಷರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಅಮಿತ್‌ ಧನ್‌ಕರ್‌ ಒಲಿಂಪಿಯನ್ ಸುಶೀಲ್‌ ಕುಮಾರ್‌ ಬದಲು ಸ್ಥಾನ ಗಿಟ್ಟಿಸಿದ್ದಾರೆ. ಧನ್‌ಕರ್‌ 2013ರಲ್ಲಿ ದೆಹಲಿಯಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಈಗ ಮತ್ತೆ ಚಿನ್ನದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ತಂಡ ಇಂತಿದೆ:ಪುರುಷರ ಫ್ರೀಸ್ಟೈಲ್: ರವಿಕುಮಾರ್‌ (57 ಕೆ.ಜಿ), ರಾಹುಲ್‌ ಆವರೆ (61 ಕೆ.ಜಿ), ಬಜರಂಗ್‌ ಪೂನಿಯಾ (65 ಕೆ.ಜಿ), ರಜನೀಶ್ (70 ಕೆ.ಜಿ), ಅಮಿತ್‌ ಧನ್‌ಕರ್‌ (74 ಕೆ.ಜಿ), ಪ್ರವೀಣ್‌ ರಾಣಾ (79 ಕೆ.ಜಿ), ದೀಪಕ್‌ ಪೂನಿಯಾ (86 ಕೆ.ಜಿ), ವಿಕ್ಕಿ (92 ಕೆ.ಜಿ), ಸತ್ಯವ್ರತ್‌ ಕಾಡಿಯನ್ (97 ಕೆ.ಜಿ) ಸುಮೀತ್‌ (125ಕೆ.ಜಿ).

ಗ್ರೀಕೋ ರೋಮನ್‌: ಮನ್‌ಜೀತ್‌ (55 ಕೆ.ಜಿ), ಜ್ಞಾನೇಂದರ್ (60 ಕೆ.ಜಿ), ವಿಕ್ರಂ ಕುಮಾರ್ (63 ಕೆ.ಜಿ), ರವೀಂದರ್ (67 ಕೆ.ಜಿ), ಯೋಗೇಶ್ (72 ಕೆ.ಜಿ), ಗುರುಪ್ರೀತ್‌ ಸಿಂಗ್ (77 ಕೆ.ಜಿ), ಹರಪ್ರೀತ್‌ ಸಿಂಗ್ (82 ಕೆ.ಜಿ), ಸುನಿಲ್‌ ಕುಮಾರ್ (87 ಕೆ.ಜಿ), ಹರದೀಪ್‌ ಸಿಂಗ್ (97 ಕೆ.ಜಿ) ಪ್ರೇಮ್‌ ಕುಮಾರ್ (130 ಕೆ.ಜಿ).

ಮಹಿಳೆಯರು: ಸೀಮಾ (50 ಕೆ.ಜಿ), ವಿನೇಶಾ ಪೋಗಟ್ (53 ಕೆ.ಜಿ), ಲಲಿತಾ ಶೆರಾವತ್ (55 ಕೆ.ಜಿ), ಪೂಜಾ ದಂಡಾ (57 ಕೆ.ಜಿ), ಮಂಜು (59 ಕೆ.ಜಿ), ಸಾಕ್ಷಿ ಮಲಿಕ್ (62 ಕೆ.ಜಿ), ನವಜೋತ್ ಕೌರ್ (65 ಕೆ.ಜಿ), ದಿವ್ಯಾ ಕಕ್ರಾನ್ (68 ಕೆ.ಜಿ), ಕಿರಣ್ (72 ಕೆ.ಜಿ) ಪೂಜಾ (76 ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.