ಚಿನ್ನದ ಪದಕ ಗೆದ್ದ ಅಭಿನ್ ದೇವಾಡಿಗ
–ಪ್ರಜಾವಾಣಿ ಚಿತ್ರ: ಎಸ್.ಕೆ.ದಿನೇಶ್
ಬೆಂಗಳೂರು: ಉಡುಪಿಯ ಅಭಿನ್ ದೇವಾಡಿಗ ಮತ್ತು ಚಿತ್ರದುರ್ಗದ ಪ್ರಕೃತಿ ರೂಪಾ ಅವರು ಸೋಮವಾರ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 200 ಮೀಟರ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಅಭಿನ್ 20.79 ಸೆಕೆಂಡ್‌ಗಳಲ್ಲಿ 200 ಮೀಟರ್ ಗುರಿ ತಲುಪಿದರು. ಬೆಂಗಳೂರಿನ ಪ್ರಸನ್ನ ಕುಮಾರ್ ವಿ.ಎಂ. (20.91ಸೆ) ಮತ್ತು ಜೊನಾಥನ್ ಸ್ಯಾಮುಯೆಲ್ (21.29ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಮಹಿಳೆಯರ ವಿಭಾಗದಲ್ಲಿ ಪ್ರಕೃತಿ 23.83 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಅಗ್ರಸ್ಥಾನಿಯಾದರು. ಬೆಂಗಳೂರಿನ ವಿ.ಸುಧೀಕ್ಷಾ (24.04ಸೆ) ಬೆಳ್ಳಿ ಗೆದ್ದರೆ, ಚಿಕ್ಕಮಗಳೂರಿನ ದಿಶಾ ಎ. (24.41ಸೆ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಫಲಿತಾಂಶ
ಪುರುಷರು: 200 ಮೀ. ಅಭಿನ್ ದೇವಾಡಿಗ (ಕಾಲ: 20.79ಸೆ, ಉಡುಪಿ)–1, ಪ್ರಸನ್ನ ಕುಮಾರ್ ವಿ.ಎಂ. (ಬೆಂಗಳೂರು)–2, ಜೊನಾಥನ್ ಸ್ಯಾಮುಯೆಲ್ (ಬೆಂಗಳೂರು)–3.
10 ಸಾವಿರ ಮೀ: ಶಿವಾಜಿ ಪರಶುರಾಮ್ (ಕಾಲ: 30ನಿ.29.3ಸೆ, ಉತ್ತರ ಕನ್ನಡ)–1, ಸಂದೀಪ್ ಟಿ.ಎಸ್. (ತುಮಕೂರು)–2, ಚೇತನ್ ಎ ಹೋಳ್ಕರ್ (ಬೆಳಗಾವಿ)–3.
ಡಿಸ್ಕಸ್ ಥ್ರೊ: ನಾಗೇಂದ್ರ ಅಣ್ಣಪ್ಪ (ಎಸೆತ: 52.82 ಮೀ, ಉತ್ತರ ಕನ್ನಡ)–1, ಮೊಹಮ್ಮದ್ ಸಕ್ಲೇನ್ ಅಹ್ಮದ್ (ಮೈಸೂರು)–2, ಸ್ಮಿತ್ ಜಾವಿಯಾ (ದಕ್ಷಿಣ ಕನ್ನಡ)–3.
ಡೆಕಾಥ್ಲಾನ್: ತ್ರಿಲೋಕ್ ಒಡೆಯರ್ (5574 ಅಂಕ, ಚಿತ್ರದುರ್ಗ)–1, ಸನತ್ ಬಿ.ಎಸ್. (ಆಳ್ವಾಸ್, ದಕ್ಷಿಣ ಕನ್ನಡ)–2, ಅಭಿಷೇಕ್ (ಕೋಲಾರ)–3.
ಮಹಿಳೆಯರು: 200 ಮೀ. ಪ್ರಕೃತಿ ರೂಪಾ ಪಾವೊ (ಕಾಲ: 23.84ಸೆ, ಚಿತ್ರದುರ್ಗ)–1, ವಿ.ಸುದೀಕ್ಷಾ (ಬೆಂಗಳೂರು)–2, ದಿಶಾ ದಿಶಾ ಎ. (ಚಿಕ್ಕಮಗಳೂರು)–3.
10 ಸಾವಿರ ಮೀ: ತೇಜಸ್ವಿನಿ ಎನ್.ಎಲ್. (ಕಾಲ: 38ನಿ.03.3ಸೆ, ಕೆಎಸ್‌ಪಿ)–1, ಶಾಹಿನ್ ಎಸ್.ಡಿ. (ಧಾರವಾಡ)–2, ಯುವರಾಣಿ (ರಾಯಚೂರು)–3.
ಡಿಸ್ಕರ್ ಥ್ರೊ: ಸುಷ್ಮಾ ಬಿ. (ಎಸೆತ: 41.08 ಮೀ, ದಕ್ಷಿಣ ಕನ್ನಡ)–1, ಮಾಧುರ್ಯ (ಉಡುಪಿ)–2, ಪ್ರಜ್ಞಾ ಗೋಯಲ್ (ಬೆಂಗಳೂರು)–3
ಹೆಪ್ಟಾಥ್ಲಾನ್: ಅಕ್ಷತಾ (4590 ಅಂಕ, ಉಡುಪಿ)–1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.