ADVERTISEMENT

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಮೇಲೆ ಸಾತ್ವಿಕ್‌–ಚಿರಾಗ್‌ ಕಣ್ಣು

ಪಿಟಿಐ
Published 17 ನವೆಂಬರ್ 2025, 16:19 IST
Last Updated 17 ನವೆಂಬರ್ 2025, 16:19 IST
<div class="paragraphs"><p>ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿ </p></div>

ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿ

   

–ಪಿಟಿಐ ಸಂಗ್ರಹ ಚಿತ್ರ

ಸಿಡ್ನಿ: ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ADVERTISEMENT

ಆದರೆ, ಈ ವರ್ಷ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡದ ಭಾರತದ ಸಿಂಗಲ್ಸ್‌ ಆಟಗಾರರು ತಮ್ಮ ಆಟವನ್ನು ಸುಧಾರಿಸಿಕೊಳ್ಳುವ ಛಲದಲ್ಲಿದ್ದಾರೆ.

ಒಟ್ಟು ₹4.21 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಈ ಟೂರ್ನಿಯಲ್ಲಿ ಸಾತ್ವಿಕ್‌–ಚಿರಾಗ್‌ ಜೋಡಿಯು ಅಗ್ರ ಶ್ರೇಯಾಂಕ ಪಡೆದಿದೆ. ಈ ಜೋಡಿಯು ತೈವಾನ್‌ನ ಚಾಂಗ್‌ ಕೊ–ಷಿ ಹಾಗೂ ಪೊ ಲಿ–ವಿ ಅವರನ್ನು ಎದುರಿಸುವುದರೊಂದಿಗೆ ಅಭಿಯಾನ ಆರಂಭಿಸಲಿದೆ.

ಸಿಂಗಲ್ಸ್‌ ವಿಭಾಗದಲ್ಲಿ ಅನುಭವಿ ಲಕ್ಷ್ಯ ಸೇನ್‌ ಅವರು ಮೊದಲ ಸುತ್ತಿನಲ್ಲಿ ಸು ಲಿ ಯಾಂಗ್‌ (ತೈವಾನ್‌) ವಿರುದ್ಧ ಕಣಕ್ಕಿಳಿಯಲಿದ್ದಾರೆ. ಎಚ್‌.ಎಸ್‌. ಪ್ರಣಯ್‌ ಅವರು ಕೆನಡಾದ ಬ್ರಯಾನ್‌ ಯಾಂಗ್‌ ವಿರುದ್ಧ ಹಾಗೂ ಕಿದಂಬಿ ಶ್ರೀಕಾಂತ್‌ ಅವರು ತೈವಾನ್‌ನ ಲಿನ್‌ ಷುನ್‌–ಯಿ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಅಮೆರಿಕ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಚಾಂಪಿಯನ್‌, ಕರ್ನಾಟಕದ ಆಯುಷ್‌ ಶೆಟ್ಟಿ ಅವರು ಮಲೇಷ್ಯಾದ ಜಸ್ಟಿನ್‌ ಹೋ ಎದುರು ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.