ADVERTISEMENT

ಗಾಲ್ಫ್‌: ಅವನಿ ಸಿರಿಕಿಟ್‌ ‘ಕ್ವೀನ್‌’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:45 IST
Last Updated 24 ಫೆಬ್ರುವರಿ 2023, 22:45 IST
ಅವನಿ ಪ್ರಶಾಂತ್‌, ವಿಧಾತ್ರಿ ಅರಸ್‌ ಮತ್ತು ನಿಶ್ನಾ ಪಟೇಲ್‌
ಅವನಿ ಪ್ರಶಾಂತ್‌, ವಿಧಾತ್ರಿ ಅರಸ್‌ ಮತ್ತು ನಿಶ್ನಾ ಪಟೇಲ್‌   

ಮನಿಲಾ, ಫಿಲಿಪ್ಪೀನ್ಸ್: ಭಾರತದ ಅವನಿ ಪ್ರಶಾಂತ್‌ ಅವರು ಇಲ್ಲಿ ನಡೆದ ಕ್ವೀನ್ ಸಿರಿಕಿಟ್‌ ಕಪ್ ಅಮೆಚೂರ್‌ ಗಾಲ್ಫ್ ಟೂರ್ನಿಯಲ್ಲಿ ಶುಕ್ರವಾರ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ದೇಶದ ಮೊದಲ ಗಾಲ್ಫರ್ ಎನಿಸಿಕೊಂಡರು.

ಇಲ್ಲಿ ಕಿರೀಟ ಧರಿಸುವುದರೊಂದಿಗೆ ಬೆಂಗಳೂರಿನ ಆಟಗಾರ್ತಿ, ತಂಡ ವಿಭಾಗದಲ್ಲಿ ಭಾರತವನ್ನು ಎರಡನೇ ಸ್ಥಾನಕ್ಕೇರಿಸಿದರು. 43 ವರ್ಷಗಳ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಸಾಧನೆ ಇದು.

ಫಿಲಿಪ್ಪೀನ್ಸ್‌ನ ರಿಯಾನ್ನೆ ಮಿಕೆಲಾ ಮಾಲಿಕ್ಸಿ ಮತ್ತು ಕೊರಿಯಾದ ಹ್ಯುಂಜೊ ಯೂ ಜಂಟಿ ಮೂರನೇ ಸ್ಥಾನ ಪಡೆದರು.

ADVERTISEMENT

16 ವರ್ಷದ ಆಟಗಾರ್ತಿ ಅವನಿ ಇತ್ತೀಚೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿದ್ದರು. ಈ ಟೂರ್ನಿಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು.

‘ಬಹು ದಿನಗಳ ಕಾಯುವಿಕೆಯ ಬಳಿಕ ಈ ಗೆಲುವು ಸಿಕ್ಕಿದೆ. ಬಹಳ ಸಂತೋಷವಾಗಿದೆ. ಆದರೆ ಆಗಸ್ಟಾ ಟೂರ್ನಿಗೆ ಅರ್ಹತೆ ಗಳಿಸದಿದ್ದುದು ಸ್ವಲ್ಪ ನಿರಾಸೆ ಉಂಟುಮಾಡಿದೆ. ಮುಂದಿನ ವರ್ಷ ಪ್ರವೇಶ ಪಡೆಯುವ ವಿಶ್ವಾಸವಿದೆ‘ ಎಂದು ವಿಶ್ವ ಅಮೆಚೂರ್ ಗಾಲ್ಫ್ ರ‍್ಯಾಂಕಿಂಗ್‌ನಲ್ಲಿ 93ನೇ ಸ್ಥಾನದಲ್ಲಿರುವ ಅವನಿ ಹೇಳಿದ್ದಾರೆ.

ಎರಡನೇ ಸ್ಥಾನ ಪಡೆದ ಭಾರತ ತಂಡದಲ್ಲಿ ವಿಧಾತ್ರಿ ಅರಸ್‌ ಮತ್ತು ನಿಶ್ನಾ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.