ADVERTISEMENT

ಜಾವೆಲಿನ್ ಥ್ರೋ: ನೀರಜ್ ಚೋಪ್ರಾಗೆ ಚಿನ್ನದ ಪದಕ

ಪಿಟಿಐ
Published 17 ಮಾರ್ಚ್ 2021, 17:36 IST
Last Updated 17 ಮಾರ್ಚ್ 2021, 17:36 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಪಟಿಯಾಲ: ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ, ಇಲ್ಲಿ ನಡೆಯುತ್ತಿರುವ 24ನೇ ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಚಿನ್ನದ ಪದಕ ಗೆದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಸಂಭವನೀಯ ಅಥ್ಲೀಟ್ ಆಗಿರುವ ನೀರಜ್ ತಮ್ಮದೇ ಹಳೆಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. 87.80 ಮೀಟರ್ಸ್ ದೂರ ಜಾವೆಲಿನ್ ಎಸೆದ ಅವರು, ತಮ್ಮದೇ ಹಳೆಯ ದಾಖಲೆಯನ್ನು ಮೀರಿ ನಿಂತರು.

ಪುರುಷರ ಮೂರು ಸಾವಿರ ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಬ್ಳೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 8ನಿಮಿಷ, 20.20 ಸೆಕೆಂಡುಗಳಲ್ಲಿ ಗುರಿ ತಲುಪಿ ತಮ್ಮದೇ ಹಳೆಯ ದಾಖಲೆಯನ್ನು ಮೀರಿದರು.

ADVERTISEMENT

ಶಾಟ್‌ಪಟ್‌ನಲ್ಲಿ ತಜಿಂದರ್ ಪಾಲ್ ತೂರ್ 20.58 ಮೀಟರ್ಸ್ ದೂರ ಎಸೆದು ಚಿನ್ನದ ಪದಕ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.