
ಪಿಟಿಐ
ಪ್ರಾತಿನಿಧಿಕ ಚಿತ್ರ
ಇಪೊ (ಮಲೇಷ್ಯಾ): ಸೆಲ್ವಂ ಕಾರ್ತಿ ಆಟ ಮುಕ್ತಾಯಕ್ಕೆ ಆರು ನಿಮಿಷಗಳಿದ್ದಾಗ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ, ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿ ಪಂದ್ಯದಲ್ಲಿ ಗುರುವಾರ ನ್ಯೂಜಿಲೆಂಡ್ ತಂಡವನ್ನು 3–2 ರಿಂದ ಸೋಲಿಸಿತು.
ಐದು ಬಾರಿಯ ಚಾಂಪಿಯುನ್ ಭಾರತ ತಂಡ ಬುಧವಾರ ಆತಿಥೇಯ ಮಲೇಷ್ಯಾ ತಂಡವನ್ನು 4–3 ಗೋಲುಗಳಿಂದ ಸೋಲಿಸಿತ್ತು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮಿತ್ ರೋಹಿದಾಸ್ (4ನೇ ನಿಮಿಷ), ಸಂಜಯ್ (32ನೇ ನಿಮಿಷ) ಮತ್ತು ಸೆಲ್ವಂ (54ನೇ ನಿಮಿಷ) ಗೋಲುಗಳನ್ನು ಗಳಿಸಿದರು. ಮೊದಲೆರಡು ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ಬಂದವು. ನ್ಯೂಜಿಲೆಂಡ್ ಪರ ಜಾರ್ಜ್ ಬೆಕರ್ ಅವರು ಎರಡೂ ಗೋಲುಗಳನ್ನು ಕ್ರಮವಾಗಿ 42 ಮತ್ತು 48ನೇ ನಿಮಿಷ ಹೊಡೆದರು.
ಭಾರತ ತಂಡ ಶನಿವಾರ ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.