ADVERTISEMENT

'ದಿ ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು': ಝೂಕರೆಲಿಗೆ ಗೆಲ್ಲುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:31 IST
Last Updated 25 ಜನವರಿ 2022, 19:31 IST
   

ಬೆಂಗಳೂರು: ಬೆಂಗಳೂರು ಚಳಿಗಾಲದ ರೇಸ್‌ಗಳ ಅತ್ಯಂತ ಪ್ರತಿಷ್ಠಿತ ರೇಸ್‌ ‘ದಿ ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು‘
ಬುಧವಾರ ಗಣರಾಜ್ಯೋತ್ಸವದ ದಿನ ಬೆಂಗಳೂರು ಟರ್ಫ್‌ ಕ್ಲಬ್‌ ಆವರಣದಲ್ಲಿ ನಡೆಯಲಿದೆ.
ಯುನೈಟೆಡ್‌ ಬ್ರೂವರೀಸ್‌ ಡರ್ಬಿಯನ್ನು ಪ್ರಾಯೋಜಿಸುತ್ತಿದೆ. ಬೆಂಗಳೂರು ಟರ್ಫ್‌ ಕ್ಲಬ್‌ ಜೊತೆಗೂಡಿ ನಡೆಸುತ್ತಿರುವ ರೇಸ್‌ನ ಒಟ್ಟು ಬಹುಮಾನ ಮೊತ್ತ ₹ 1 ಕೋಟಿ 39.35 ಲಕ್ಷ ಆಗಿದೆ. ಇದುವರೆಗಿನ ರೇಸ್‌ಗಳಲ್ಲಿ ಇದು ದಾಖಲೆಯ ಮೊತ್ತವಾಗಿದೆ. ಇದರಲ್ಲಿ ಗೆಲ್ಲುವ ಅಶ್ವವು ತನ್ನ ಮಾಲೀಕನಿಗೆ ಸುಮಾರು ₹ 2 ಲಕ್ಷ ಮೌಲ್ಯದ ಟ್ರೋಫಿಯೊಂದಿಗೆ ₹ 68.28 ಲಕ್ಷ ದೊರಕಿಸಿಕೊಡಲಿದೆ.

ಕಿಂಗ್ಸ್‌ಟನ್‌ ಕೋರ್ಟ್‌ ಮತ್ತು ಸಿಟಾರೆ ಕಣದಿಂದ ಹಿಂದಕ್ಕೆ ಸರಿದಿರುವ ಕಾರಣ ಏಳು ಕುದುರೆಗಳು ಮಾತ್ರ ಕಣದಲ್ಲಿ ಉಳಿದಿವೆ.
ಇವುಗಳಲ್ಲಿ ಐದು ಗಂಡು ಮತ್ತು ಎರಡು ಹೆಣ್ಣು ಕುದುರೆಗಳು. ಈವರೆಗಿನ ಸಾಮರ್ಥ್ಯದ ಆಧಾರದಲ್ಲಿ ಪೆಸಿ ಶ್ರಾಫ್‌ ತರಬೇತಿನಲ್ಲಿ ಪಳಗಿರುವ ಜುಕ್ಕರೆಲ್ಲಿ ಡರ್ಬಿ ಗೆಲ್ಲುವ ನೆಚ್ಚಿನ ಕುದುರೆ ಎನಿಸಿದೆ. ಮುಂಬೈನ ಸ್ಪರ್ಧಿ ಜುಕ್ಕರೆಲ್ಲಿ ಇಂಡಿಯನ್‌ 2000 ಗಿನ್ನೀಸ್‌ನಲ್ಲಿ ‘ಎ ಸ್ಟಾರ್‌ ಈಸ್‌ ಬಾರ್ನ್‌‘ಗೆ ಸೋತಿದ್ದು, ಬುಧವಾರ ಟ್ರೆವರ್‌ ಪಟೇಲ್‌ ಸವಾರಿಯಲ್ಲಿ ಡರ್ಬಿ ಗೆಲ್ಲುವ ತವಕದಲ್ಲಿದೆ. ಸ್ಥಳೀಯ ಸ್ಪರ್ಧಿಗಳಾದ ಇಟೋಷಾ ಮತ್ತು ಆಲ್‌ ಅಟ್ರ್ಯಾಕ್ಟಿವ್‌ ಸವಾಲೊಡ್ಡುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT