
ಪ್ರಜಾವಾಣಿ ವಾರ್ತೆ
ಕುದುರೆ ರೇಸ್
(ಪ್ರಜಾವಾಣಿ ಸಂಗ್ರಹ ಚಿತ್ರ)
ಬೆಂಗಳೂರು: ಕೆಲ ಕುದುರೆಗಳಿಗೆ ‘ಗ್ಲ್ಯಾಂಡರ್ಸ್’ ರೋಗದ ಸೋಂಕು ಕಾಣಿಸಿಕೊಂಡ ಕಾರಣ, ಇದೇ ಗುರುವಾರ ಮತ್ತು ಶುಕ್ರವಾರ (ಡಿ.11 ಮತ್ತು 12) ಏರ್ಪಡಿಸಿದ್ದ ಬೆಂಗಳೂರು ರೇಸ್ ಅನ್ನು ರದ್ದುಪಡಿಸಲಾಗಿದೆ.
ಶುಕ್ರವಾರ ನಡೆಯಬೇಕಿದ್ದ ‘ಜವಾರೆ ಎಸ್. ಪೂನಾವಾಲ ಬೆಂಗಳೂರು 2000 ಗಿನ್ನೀಸ್’ ಅನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ತಿಳಿಸಿದೆ. ಗ್ಲ್ಯಾಂಡರ್ಸ್ ಸೋಂಕು ತಡೆಗಟ್ಟಲು, ಬಿಟಿಸಿಯಿಂದ ಹೊರಹೋಗುವ ಮತ್ತು ಒಳಬರುವ ಕುದುರೆಗಳ ಓಡಾಟವನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.