
ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಜೈನ್ ವಿಶ್ವವಿದ್ಯಾಲಯ, ಎಸ್‌ಆರ್‌ಎಂ ವಿಶ್ವ ವಿದ್ಯಾಲಯ ತಂಡಗಳು ಗುರುವಾರ ಅಖಿಲ ಭಾರತ ಅಂತರ ವಿಶ್ವ ವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಕನಕಪುರ ರಸ್ತೆಯಲ್ಲಿರುವ ಜೈನ್ ವಿ.ವಿಯ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ದಿನದ ಪಂದ್ಯದಲ್ಲಿ ಆತಿಥೇಯ ಜೈನ್ ತಂಡವು 61–32ರಿಂದ ಚಂಡೀಗಢ ವಿರುದ್ಧ; ಎಸ್‌ಆರ್‌ಎಂ ತಂಡವು 88–80ರಿಂದ ರಾಜಸ್ಥಾನ ವಿ.ವಿ ವಿರುದ್ಧ ಗೆಲುವು
ಸಾಧಿಸಿದವು.
ಇತರ ಪಂದ್ಯಗಳಲ್ಲಿ ಕ್ರೈಸ್ಟ್ ವಿ.ವಿ 56–36ರಿಂದ ಪಂಡಿತ್ ರವಿಶಂಕರ್ ವಿ.ವಿ ವಿರುದ್ಧ; ಲ್ನೈಪ್ ಗ್ವಾಲಿಯರ್ 58–51ರಿಂದ ಲವ್ಲಿ ಪ್ರೊಫೆಷನಲ್ ವಿ.ವಿ ವಿರುದ್ಧ; ಹೇಮಚಂದ್ ಯಾದವ್ ವಿ.ವಿ 53–37ರಿಂದ ಎಂಬಿಎಸ್
ಪಿಎಸ್ ವಿ.ವಿ ವಿರುದ್ಧ; ಪಂಜಾಬ್ ವಿ.ವಿ 71–30ರಿಂದ ಸಂತ ವಿಶ್ವವಿದ್ಯಾಲಯ ವಿರುದ್ಧ ಜಯ ಗಳಿಸಿದವು.
ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಜೈನ್ ತಂಡವು ಲವ್ಲಿ ಪ್ರೊಫೆಷನಲ್ ವಿವಿ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.