
ತುಮಕೂರು: ಬೆಂಗಳೂರಿನ ಯಂಗ್ ಒರಿಯನ್ಸ್ ಮತ್ತು ಮೈಸೂರು ತಂಡಗಳು, ರಾಜ್ಯ ಒಲಿಂಪಿಕ್ಸ್ ಪ್ರಯುಕ್ತ ನಡೆಯುತ್ತಿರುವ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದವು.
ಯಂಗ್ ಒರಿಯನ್ಸ್ ತಂಡ ಬುಧವಾರ ನಡೆದ ಫೈನಲ್‌ನಲ್ಲಿ 76–71 ರಲ್ಲಿ ಐದು ಅಂಕಗಳಿಂದ ಬ್ಯಾಂಕ್ ಆಫ್ ಬರೋಡ ತಂಡವನ್ನು ಮಣಿಸಿತು. ಯಂಗ್ ಒರಿಯನ್ಸ್ ಆಟಗಾರರು ಆರಂಭದಿಂದಲೂ ಉತ್ತಮ ಆಟದ ಪ್ರದರ್ಶನ ತೋರಿದರು. ಒರಿಯನ್ಸ್‌ನ ಅಭಿಷೇಕ್ 24, ಗೌತಮ್ 16 ಪಾಯಿಂಟ್ಸ್ ಗಳಿಸಿದರು. ಡಿವೈಇಎಸ್ ಬೆಂಗಳೂರು ತಂಡ 49–28 ರಿಂದ ಜಿಎಸ್‌ಟಿ ಕಸ್ಟಮ್ಸ್ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಮಹಿಳೆಯರ ಫೈನಲ್ ಪಂದ್ಯದಲ್ಲಿ ಡಿವೈಇಎಸ್ ಮೈಸೂರು ತಂಡ 30–18 ರಿಂದ ಡಿವೈಇಎಸ್ ವಿದ್ಯಾನಗರ ತಂಡವನ್ನು ಮಣಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಸಾನಿಕಾ (10 ಪಾಯಿಂಟ್ಸ್), ಸಾಧನಾ (8 ಪಾಯಿಂಟ್ಸ್) ಉತ್ತಮ ಆಟದ ನೆರವಿನಿಂದ ಮೈಸೂರು ತಂಡ 30-18 ಅಂತರದಿಂದ ಜಯ ಸಾಧಿಸಿತು. ಡಿವೈಇಎಸ್ ಮಂಡ್ಯ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ವೇಟ್‌ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡದ ಪುರುಷ ಹಾಗೂ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಪುರುಷರ 110 ಕೆ.ಜಿ ಮತ್ತು 110 ಕೆ.ಜಿ ಮೇಲ್ಪಟ್ಟವರ ವಿಭಾಗದಲ್ಲಿ ಎಲ್ಲ ಆರೂ ಪದಕಗಳು ದಕ್ಷಿಣ ಕನ್ನಡದ ಪಾಲಾದವು. ಪ್ರತ್ಯುಶ್, ರಂಜಿತ್ ಕುಮಾರ್, ಪ್ರೀತೇಶ್ ಡಿಸಿಲ್ವಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
110 ಕೆ.ಜಿ ವಿಭಾಗದಲ್ಲಿ ಯು.ಗಿರೀಶ್, ಸಮರ್ಥ್ ಸುತರ್ವೆ, ಎನ್.ಇ.ನಟರಾಜ ಚಿನ್ನ, ಬೆಳ್ಳಿ, ಕಂಚು ಗೆದ್ದರು.
ಚಿರಂತ್‌ಗೆ ಮೂರು ಚಿನ್ನ
ಪುರುಷರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಭಾಗದಲ್ಲಿ ಬೆಂಗಳೂರಿನ ಚಿರಂತ್ ವಿ.ಶೆಟ್ಟಿ ಮಿಂಚಿದರು. ಮೂರು ಚಿನ್ನ ಒಂದು ಬೆಳ್ಳಿ ಒಂದು ಕಂಚಿನ ಪದಕ ಪಡೆದರು. ಜಿಮ್ನಾಸ್ಟಿಕ್: ಪುರುಷರ ಆಲ್‌ರೌಂಡರ್ ವೈಯಕ್ತಿಕ ವಿಭಾಗ– ಚಿರಂತ್ ವಿ.ಶೆಟ್ಟಿ (ಬೆಂಗಳೂರು) ಗಂಗಾಧರ್ ಮತ್ತಿ (ಧಾರವಾಡ) ಬಿ.ಎನ್.ತ್ರಿಶೂಲ್ ಗೌಡ (ಬೆಂಗಳೂರು). ಟೇಬಲ್ ವಾಲ್ಟ್– ಚಿರಂತ್ ವಿ.ಶೆಟ್ಟಿ (ಬೆಂಗಳೂರು) ಆರ್.ಎ.ಗಗನ್ (ತುಮಕೂರು) ಡಿ.ಎಂ.ದಶನ್ (ಮೈಸೂರು). ಫ್ಲೋರ್ ಎಕ್ಸರ್‌ಸೈಸ್– ಚಿರಂತ್ ವಿ.ಶೆಟ್ಟಿ (ಬೆಂಗಳೂರು) ಡಿ.ಎಂ.ದಶನ್ (ಮೈಸೂರು) ಸಂಕೇತ್ ಎಸ್.ಮಾನೆ (ಧಾರವಾಡ). ಪಾಮೆಲ್ ಹಾರ್ಸ್– ಗಂಗಾಧರ್ ಮತ್ತಿ (ಧಾರವಾಡ) ಬಿ.ಎನ್.ತ್ರಿಶೂಲ್ ಗೌಡ (ಬೆಂಗಳೂರು) ಜೆ.ಚಿರಂತ್ (ತುಮಕೂರು). ಪ್ಯಾರಲಲ್ ಬಾರ್ಸ್– ಎಚ್.ಎಸ್.ಜೀವನ್ (ಮೈಸೂರು) ಜೆ.ಚಿರಂತ್ (ತುಮಕೂರು) ಗಂಗಾಧರ್ ಮತ್ತಿ (ಧಾರವಾಡ). ಸ್ಟಿಲ್ ರಿಂಗ್ಸ್– ಬಿ.ಎನ್.ತ್ರಿಶೂಲ್ ಗೌಡ (ಬೆಂಗಳೂರು) ಸಂಕೇತ್ ಎಸ್.ಮಾನೆ (ಧಾರವಾಡ) ಚಿರಂತ್ ವಿ.ಶೆಟ್ಟಿ (ಬೆಂಗಳೂರು). ಹೈ ಬಾರ್– ಡಿ.ಎಂ.ದಶನ್ (ಮೈಸೂರು) ಚಿರಂತ್ ವಿ.ಶೆಟ್ಟಿ (ಬೆಂಗಳೂರು) ಸಂಕೇತ್ ಎಸ್.ಮಾನೆ (ಧಾರವಾಡ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.