ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:36 IST
Last Updated 18 ಡಿಸೆಂಬರ್ 2018, 19:36 IST
ತೆಲುಗು ಟೈಟನ್ಸ್‌ ಮತ್ತು ಬೆಂಗಳೂರು ಬುಲ್ಸ್‌ ತಂಡಗಳ ನಡುವಿನ ಹಣಾಹಣಿ
ತೆಲುಗು ಟೈಟನ್ಸ್‌ ಮತ್ತು ಬೆಂಗಳೂರು ಬುಲ್ಸ್‌ ತಂಡಗಳ ನಡುವಿನ ಹಣಾಹಣಿ   

ಪಂಚಕುಲಾ: ಮಿಂಚಿನ ಆಟವಾಡಿದ ಪವನಕುಮಾರ್ ಶೇರಾವತ್ ಅವರ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ಜಯ ಗಳಿಸಿತು.

ಮಿಂಚಿನ ದಾಳಿ ನಡೆಸಿದ ಪವನ್‌ ಕುಮಾರ್ 13 ಅಂಕಗಳನ್ನು ಗಳಿಸಿದರು. ಇದರಿಂದಾಗಿ ಬುಲ್ಸ್‌ ತಂಡವು 44–28ರಿಂದ ತೆಲುಗು ಟೈಟನ್ಸ್‌ ವಿರುದ್ಧ ಗೆದ್ದಿತು.

ಟೈಟನ್ಸ್‌ ತಂಡವು ತಿರುಗೇಟು ನೀಡಲು ಅವಕಾಶವನ್ನೇ ನೀಡದ ಬುಲ್ಸ್‌ ತಂಡವು ದೊಡ್ಡ ಅಂತರದ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ತಂಡದ ರೋಹಿತ್ ಕುಮಾರ್ ರೇಡಿಂಗ್‌ನಲ್ಲಿ ಆರು ಮತ್ತು ಟ್ಯಾಕಲ್‌ನಲ್ಲಿ ಒಂದು ಅಂಕ ಗಳಿಸಿದರು. ಅಮಿತ್ ಶೇರಾನ್ ಟ್ಯಾಕಲ್‌ನಲ್ಲಿ ಮಿಂಚಿದರು. ಐದು ಅಂಕಗಳನ್ನು ಗಳಿಸಿದರು.

ADVERTISEMENT

ಆಶಿಶ್ ಕುಮಾರ್ ಮತ್ತು ಕಾಶಿಲಿಂಗ್ ಅಡಕೆ ಅವರು ಕ್ರಮವಾಗಿ ನಾಲ್ಕು ಮತ್ತು ಮೂರು ಅಂಕ ಗಳಿಸಿ ತಂಡಕ್ಕೆ ನೆರವಾದರು. ಟೈಟನ್ಸ್‌ ತಂಡದಲ್ಲಿ ರಾಹುಲ್ ಚೌಧರಿ 13 ಅಂಕಗಳನ್ನು ಗಳಿಸಿದರು. ಮೊಹಸೀನ್ ಟ್ಯಾಕಲ್‌ನಲ್ಲಿ ಆರು ಪಾಯಿಂಟ್, ಫರ್ಹಾದ್ ಎರಡು ಪಾಯಿಂಟ್ ಸಂಗ್ರಹಿಸಿದರು.

‘ಬಿ’ ಗುಂಪಿನಲ್ಲಿ ಒಟ್ಟು 19 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡವು 12ರಲ್ಲಿ ಗೆದ್ದಿದೆ. ಆರರಲ್ಲಿ ಸೋತು, ಒಂದರಲ್ಲಿ ಡ್ರಾ ಮಾಡಿಕೊಂಡಿದೆ. 69 ಅಂಕಗಳೊಂದಿಗೆ ಗುಂಪಿನ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.