ADVERTISEMENT

ಜೂನ್‌ 10ರಿಂದ ಬಾಕ್ಸರ್‌ಗಳಿಗೆ ತರಬೇತಿ ಶಿಬಿರ

ಪಿಟಿಐ
Published 23 ಮೇ 2020, 18:51 IST
Last Updated 23 ಮೇ 2020, 18:51 IST
ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ
ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ   

ನವದೆಹಲಿ: ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಬಾಕ್ಸರ್‌ಗಳಿಗೆ ಜೂನ್‌ 10ರಿಂದ ತರಬೇತಿ ಶಿಬಿರ ನಡೆಸಲು ಭಾರತ ಬಾಕ್ಸಿಂಗ್ ಫೆಡರೇಷನ್ ನಿರ್ಧರಿಸಿದೆ. ಪುರುಷ ಮತ್ತು ಮಹಿಳಾ ತಂಡಗಳಿಗೆ ಪಟಿಯಾಲದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.

ಫೆಡರೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಕೆ.ಸಚೇತಿ, ಉಪಾಧ್ಯಕ್ಷ ರಾಜೇಶ್ ಭಂಡಾರಿ, ಹೈ ಪರ್ಫಾರ್ಮೆನ್ಸ್ ನಿರ್ದೇಶಕರಾದ ಸ್ಯಾಂಟಿಯಾಗೊ ನೀವಾ, ರಾಫೆಲ್ ಬರ್ಗಮಾಸೊ, ಮುಖ್ಯ ಕೋಚ್‌ಗಳಾದ ಸಿ.ಎ.ಕುಟ್ಟಪ್ಪ ಮತ್ತು ಮೊಹಮ್ಮದ್ ಅಲಿ ಖಮರ್ ಅವರು ಶನಿವಾರ ಬಾಕ್ಸರ್‌ಗಳ ಜೊತೆ ವಿಡಿಯೊ ಮೂಲಕ ಸಂವಾದ ನಡೆಸಿದರು.

ನಂತರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ‘ಔಪಚಾರಿಕ ತರಬೇತಿಗೆ ಯಾವುದೂ ಸಾಟಿಯಲ್ಲ. ಆದಷ್ಟು ಬೇಗ ಅದನ್ನು ಆರಂಭಿಸಬೇಕು ಎಂದು ಬಾಕ್ಸರ್‌ಗಳು ಆಗ್ರಹಿಸಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಲಾಗಿದೆ.

ADVERTISEMENT

ಅಮಿತ್ ಪಂಗಲ್‌ (52 ಕೆಜಿ), ಮನೀಷ್ ಕೌಶಿಕ್ (63 ಕೆಜಿ), ವಿಕಾಸ್ ಕೃಷ್ಣ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಸತೀಶ್ ಕುಮಾರ್ (+91ಕೆಜಿ), ಎಂ.ಸಿ.ಮೇರಿ ಕೋಮ್ (51ಕೆಜಿ), ಸಿಮ್ರನ್‌ಜೀತ್ ಕೌರ್‌ (60 ಕೆಜಿ), ಲೌಲಿನಾ ಬೋರ್ಗೇನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.