ADVERTISEMENT

ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್

ಪಿಟಿಐ
Published 5 ಏಪ್ರಿಲ್ 2022, 13:27 IST
Last Updated 5 ಏಪ್ರಿಲ್ 2022, 13:27 IST
ಎದುರಾಳಿಗೆ ಪಂಚ್ ಮಾಡಿದ ಭಾರತದ ಸುಮಿತ್‌ (ಬಲ)– ಟ್ವಿಟರ್‌ ಚಿತ್ರ
ಎದುರಾಳಿಗೆ ಪಂಚ್ ಮಾಡಿದ ಭಾರತದ ಸುಮಿತ್‌ (ಬಲ)– ಟ್ವಿಟರ್‌ ಚಿತ್ರ   

ನವದೆಹಲಿ: ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಸುಮಿತ್‌, ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ 75 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸುಮಿತ್‌ 5–0ಯಿಂದ ಕಜಕಸ್ತಾನಸ ತೈಮೂರ್‌ ನೂರ್‌ಸಿಟೊವ್ ಅವರಿಗೆ ಸೋಲಿನ ಪಂಚ್‌ ನೀಡಿದರು.

ಭಾರತದ ಬಾಕ್ಸರ್‌ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತ್ತು. ಮೋನಿಕಾ (48 ಕೆಜಿ), ಆಶಿಶ್ ಕುಮಾರ್‌ (81 ಕೆಜಿ) ಮತ್ತು ಮನೀಷಾ (57 ಕೆಜಿ) ಈಗಾಗಲೇ ನಾಲ್ಕರ ಘಟ್ಟ ತಲುಪಿದ್ದಾರೆ.

ADVERTISEMENT

91 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೌರವ್‌ ಚೌಹಾನ್ ಎಂಟರಘಟ್ಟದಲ್ಲಿ ಮುಗ್ಗರಿಸಿದರು. ಅವರು 1–4ರಿಂದ 2018ರ ಯೂತ್ ಒಲಿಂಪಿಕ್ಸ್ ಚಾಂಪಿಯನ್‌ ಕಜಕಸ್ತಾನದ ಐಬೆಕ್‌ ಒರಲ್‌ಬೆ ಅವರಿಗೆ ಸೋತರು.

2019ರಲ್ಲಿ ನಡೆದಟೂರ್ನಿಯ ಕಳೆದ ಆವೃತ್ತಿಯಲ್ಲಿ ಭಾರತ ತಂಡದ ಎಂಟು ಮಂದಿ ಪದಕ ಗೆದ್ದುಕೊಂಡಿದ್ದರು. ಅದರಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.