
ನವದೆಹಲಿ: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಸಿ.ಎ.ಕುಟ್ಟಪ್ಪ ಅವರು ಭಾರತ ಪುರುಷರ ಬಾಕ್ಸಿಂಗ್ ತಂಡಕ್ಕೆ ಮೂರನೇ ಬಾರಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರ ನೇಮಕವನ್ನು ಭಾರತ ಬಾಕ್ಸಿಂಗ್ ಫೆಡರೇಷನ್ ಮಂಗಳವಾರ ಖಚಿತಪಡಿಸಿದೆ.
ರೋಹ್ತಕ್‌ನ ಭಾರತ ಕ್ರೀಡಾ ಪ್ರಾಧಿಕಾರದ ಕೋಚ್ ಧರ್ಮೇಂದರ್ ಯಾದವ್ ಸ್ಥಾನಕ್ಕೆ ಸರ್ವಿಸಸ್‌ನ ಕುಟ್ಟಪ್ಪ ಅವರು ನೇಮಕಗೊಂಡಿದ್ದಾರೆ. ಆದರೆ ಯಾದವ್ ಅವರು ಕೋಚಿಂಗ್ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್ ಪಿಟಿಐಗೆ ತಿಳಿಸಿದ್ದಾರೆ.
ಭಾರತ ಪುರುಷರ ತಂಡ ಕೆಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ ತೋರದ ಕಾರಣ ಈ ಬದಲಾವಣೆ ಮಾಡಲಾಗಿದೆ. 2024ರ ಒಲಿಂಪಿಕ್ಸ್‌ಗೆ ಭಾರತದ ಇಬ್ಬರು ಬಾಕ್ಸರ್‌ಗಳಷ್ಟೇ ಅರ್ಹತೆ ಪಡೆದಿದ್ದರು. ಲಿವರ್‌ಪೂಲ್‌ನಲ್ಲಿ ನಡೆದ 2025ರ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ತಂಡ ಒಂದೂ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಮೈಸೂರಿನವರಾದ ಕುಟ್ಟಪ್ಪ ಅವರು ಈ ಹಿಂದೆ ಎರಡು ಬಾರಿ ಕೋಚಿಂಗ್ ಹೊಣೆ ಹೊತ್ತಿದ್ದರು. ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ವೇಳೆ ತಂಡದ ಹೆಡ್ ಕೋಚ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.