ADVERTISEMENT

ನರಿಂದರ್ ಬಾತ್ರಾ ವಿರುದ್ಧ ಸಿಬಿಐ ತನಿಖೆ

ಪಿಟಿಐ
Published 6 ಏಪ್ರಿಲ್ 2022, 15:47 IST
Last Updated 6 ಏಪ್ರಿಲ್ 2022, 15:47 IST
ನರಿಂದರ್ ಬಾತ್ರಾ –ಎಎಫ್‌ಪಿ ಚಿತ್ರ
ನರಿಂದರ್ ಬಾತ್ರಾ –ಎಎಫ್‌ಪಿ ಚಿತ್ರ   

ನವದೆಹಲಿ: ಹಾಕಿ ಇಂಡಿಯಾ ಖಾತೆಗೆ ಸಂಬಂಧಿಸಿದ ₹ 35 ಲಕ್ಷ ಮೊತ್ತವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ ವಿರುದ್ಧ ಸಿಬಿಐ ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿಕೊಂಡಿದೆ.

ಸಂಸ್ಥೆಯ ಮೊತ್ತವನ್ನು ಖಾಸಗಿ ಅಗತ್ಯಗಳಿಗೆ ಬಾತ್ರಾ ಬಳಸಿಕೊಂಡಿದ್ದಾರೆ. ಅವರು ತಪ್ಪಿತಸ್ಥರು ಎಂಬುದನ್ನು ಮೇಲ್ನೋಟಕ್ಕೆ ಖಚಿತಪಿಡಿಸಿಕೊಳ್ಳಲು ಪ್ರಾಥಮಿ ವಿಚಾರಣೆ ಅತ್ಯಗತ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈಚಿನ ಟೂರ್ನಿಗಳಲ್ಲಿ ಭಾರತ ಪುರುಷ ಹಾಕಿ ತಂಡ ನಿರೀಕ್ಷಿತ ಸಾಮರ್ಥ್ಯ ತೋರದೇ ಇರುವುದರ ಬಗ್ಗೆ ಬಾತ್ರಾ ಕಠಣ ಮಾತುಗಳಲ್ಲಿ ಪ್ರತಿಕ್ರಿಯಿಸಿದ್ದರು. ಹಾಕಿ ಇಂಡಿಯಾಗೆ ಈ ಕುರಿತು ಸ್ಪಷ್ಟ ಸಂದೇಶವನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಹಾಕಿ ಇಂಡಿಯಾದ ಹಗ್ಗ ಜಗ್ಗಾಟ ನಡೆದಿತ್ತು. ಅಸ್ಲಾಂ ಶೇರ್ ಖಾನ್ ಅವರಂಥ ಹಿರಿಯ ಆಟಗಾರರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.