ADVERTISEMENT

ಕೈರೊಸ್ ಕಪ್ ಹಾಕಿ ಟೂರ್ನಿ: ಕೆನರಾ ಬ್ಯಾಂಕ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 8:33 IST
Last Updated 5 ಏಪ್ರಿಲ್ 2021, 8:33 IST
ಪ್ರಶಸ್ತಿ ವಿಜೇತ ಕೆನರಾ ಬ್ಯಾಂಕ್ ತಂಡಕ್ಕೆ ಒಲಿಂಪಿಯನ್ ಹಾಗೂ ಪದ್ಮಶ್ರೀ ಪುರಸ್ಕೃತ ಮಾಜಿ ಹಾಕಿ ಆಟಗಾರ ಧನರಾಜ್ ಪಿಳ್ಳೈ (ಮಧ್ಯೆ) ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.
ಪ್ರಶಸ್ತಿ ವಿಜೇತ ಕೆನರಾ ಬ್ಯಾಂಕ್ ತಂಡಕ್ಕೆ ಒಲಿಂಪಿಯನ್ ಹಾಗೂ ಪದ್ಮಶ್ರೀ ಪುರಸ್ಕೃತ ಮಾಜಿ ಹಾಕಿ ಆಟಗಾರ ಧನರಾಜ್ ಪಿಳ್ಳೈ (ಮಧ್ಯೆ) ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.   

ಬೆಂಗಳೂರು: ಕೆನರಾ ಬ್ಯಾಂಕ್ ತಂಡವು ರೋಚಕ ಹಣಾಹಣಿಯಲ್ಲಿ ಟೀಮ್ ಕೂರ್ಗ್ ಗಲ್ಫ್ ತಂಡವನ್ನು ಮಣಿಸಿ ಕೈರೊಸ್ ಕಪ್ ಹಾಕಿಫೈವ್ ಎ ಸೈಡ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಶಾಂತಿನಗರದ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ತಂಡ 6–5ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿತು. ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 3–3 ಗೋಲುಗಳ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಶೂಟೌಟ್‌ ಮೊರೆ ಹೋಗಲಾಯಿತು.

ಶೂಟೌಟ್‌ನಲ್ಲಿ ಕೆನರಾ ಮೂರು ಬಾರಿ ಯಶಸ್ಸು ಸಾಧಿಸಿತು. ಟೀಮ್ ಕೂರ್ಗ್ ಗಲ್ಫ್ ಕೇವಲ ಎರಡು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿತು.

ADVERTISEMENT

ಸೆಮಿಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡವು 3–2ರಿಂದ ಡಿವೈಇಎಸ್‌ ‘ಎ‘ ತಂಡವನ್ನು ಸೋಲಿಸಿತ್ತು. ಕೂರ್ಗ್ ಗಲ್ಫ್‌ 5–1ರಿಂದ ಫಾಲ್ಕನ್ ಹಾಕಿ ಕ್ಲಬ್ ತಂಡವನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.