ADVERTISEMENT

ಚೆಸ್‌: ಸೆಲ್ವಮುರುಗನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 18:07 IST
Last Updated 21 ಜನವರಿ 2024, 18:07 IST
ಬಿ.ಸೆಲ್ವಮುರುಗನ್, ಪ್ರಜಾವಾಣಿ ಚಿತ್ರ/ಪುಷ್ಕರ್ ವಿ. 
ಬಿ.ಸೆಲ್ವಮುರುಗನ್, ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.     

ಬೆಂಗಳೂರು: ತಮಿಳುನಾಡಿನ ಸೆಲ್ವಮುರುಗನ್‌ ಬಿ. ಅವರು ‘ಬಿ’  ಕೆಟಗರಿ ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್ ಮಾಸ್ಟರ್ಸ್‌ ಓಪನ್‌ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 23 ವರ್ಷದ ಸೆಲ್ವಮುರುಗನ್ 10ನೇ ಹಾಗೂ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಯಶ್ ಅಭಿಜಿತ್ ಪಾಟೀಲ ಅವರೊಂದಿಗೆ ಡ್ರಾ ಮಾಡಿಕೊಂಡರು.

ಪುದುಚೇರಿಯ 12 ವರ್ಷದ ಪ್ರತಿಭೆ ಮಾದೇಶ್ ಕುಮಾರ್ ಎಸ್ ಮತ್ತು ಸೆಲ್ವಮುರುಗನ್ ತಲಾ ಒಂಬತ್ತು ಅಂಕಗಳನ್ನು ಗಳಿಸಿದರು. ಆದರೆ, ಟೈ ಬ್ರೇಕ್‌ ಸ್ಕೋರ್‌ನಲ್ಲಿ ಸೆಲ್ವಮುರುಗನ್ ಅನ್ನು ವಿಜೇತರನ್ನಾಗಿ ಘೋಷಿಸಲಾಯಿತು.

ADVERTISEMENT

ಸೆಲ್ವಮುರುಗನ್‌ಗೆ ₹1.25 ಲಕ್ಷ ಮತ್ತು ಟ್ರೋಫಿ, ರನ್ನರ್ ಅಪ್‌ ಸ್ಥಾನ ಪಡೆದ ಮಾದೇಶ್‌ಗೆ ₹1 ಲಕ್ಷ ನೀಡಲಾಯಿತು.  ತಮಿಳುನಾಡಿನ ಜೈದಂಬರೀಶ್‌ ಎನ್‌.ಆರ್. ಅವರು 8.5 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ₹ 80 ಸಾವಿರ ನಗದು ಬಹುಮಾನ ಪಡೆದರು.

ಬಿ ಕೆಟಗರಿ : 1600ಕ್ಕಿಂತ ಕಡಿಮೆ ರೇಟಿಂಗ್ಸ್: ಅದ್ವೈತ ರತ್ನಾಕರ ವಿಭೂತೆ (ಕರ್ನಾಟಕ) -1, ಸಾಹಿಲ್ ಬೆರೋನ್ (ಹರಿಯಾಣ)–2, ರವೀಶ್‌ ಕೋಟೆ (ಕರ್ನಾಟಕ)–3. 1500ಕ್ಕಿಂತ ಕಡಿಮೆ ರೇಟಿಂಗ್ಸ್‌: ಕ್ರಿಸ್ಟಿ ಜಾರ್ಜ್‌ (ಕೇರಳ)–1, ಆರ್ಯಗೋಪಾಲ್ (ಕರ್ನಾಟಕ)-2, ಸಾರ್ಥಕ ಶರ್ಮಾ (ಕರ್ನಾಟಕ)–3, 1400ಕ್ಕಿಂತ ಕಡಿಮೆ ರೇಟಿಂಗ್ಸ್‌: ವೃಶಾಂಕ್ ರಾಯಡು (ಕರ್ನಾಟಕ)–1, ಗುಹನ್‌ ನೆಲಮಂಗಲ ಹರ್ಷ (ಕರ್ನಾಟಕ)–2, ಸಾಯೋಜ್ (ಕೇರಳ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.