ADVERTISEMENT

ಎಲ್ಲ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ರದ್ದು ಮಾಡಿದ ಚೀನಾ

ಏಜೆನ್ಸೀಸ್
Published 9 ಜುಲೈ 2020, 14:51 IST
Last Updated 9 ಜುಲೈ 2020, 14:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್ : ಈ ವರ್ಷದ ಎಲ್ಲ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಆಯೋಜನೆಯನ್ನು ಚೀನಾ ರದ್ದು ಮಾಡಿದೆ.

ಆದರೆ, ಬೀಜಿಂಗ್‌ನಲ್ಲಿ 2022ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ ನ ಆಯ್ಕೆ ಟ್ರಯಲ್ಸ್‌ ಅನ್ನು ಝಾಂಗ್ಜಿಯಾಕೌ ನಲ್ಲಿ ನಡೆಸಲಿದೆ.

ಈ ವರ್ಷ ಚೀನಾ, ಆರು ಡಬ್ಲ್ಯುಟಿಎ ಟೆನಿಸ್ ಟೂರ್ನಿಗಳು, ನಾಲ್ಕು ಎಟಿಪಿ ಟೂರ್ನಿಗಳನ್ನು ಆಯೋಜಿಸಬೇಕಿತ್ತು.

ADVERTISEMENT

ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್‌ ಚೀನಾದ ವುಹಾನ್‌ನಲ್ಲಿ ಮೊದಲಿಗೆ ಪತ್ತೆಯಾಗಿತ್ತು ಅಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಈಗಲೂ ಚೀನಾದ ಹಲವೆಡೆ ಈ ವೈರಸ್‌ನ ಉಪಟಳ ಇದೆ. ಅಲ್ಲದೇ ಭಾರತ, ಅಮೆರಿಕ, ಇಟಲಿ, ಇಂಗ್ಲೆಂಡ್, ರಷ್ಯಾಗಳಲ್ಲಿಯೂ ತಾಂಡವವಾಡುತ್ತಿದೆ. ಆದ್ದರಿಂದ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.