ADVERTISEMENT

ಕೊರೊನಾ ಭೀತಿ ನಿಲ್ಲದಿದ್ದರೆ ಕ್ರೀಡಾಕೂಟ ಮುಂದೂಡಿ: ಒಲಿಂಪಿಕ್ ಸಮಿತಿಗಳಿಂದ ಒತ್ತಾಯ

ಏಜೆನ್ಸೀಸ್
Published 21 ಮಾರ್ಚ್ 2020, 4:40 IST
Last Updated 21 ಮಾರ್ಚ್ 2020, 4:40 IST
   

ಬೊಗೊಟಾ: ಕೊರೊನಾ ಸೋಂಕು ಭೀತಿ ನಿಯಂತ್ರಣಕ್ಕೆ ಬಾರದಿದ್ದರೆ, ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂಡಬೇಕು ಎಂದು ಕೊಲಂಬಿಯಾ ಹಾಗೂ ಸ್ಲೊವೇನಿಯಾದ ಒಲಿಂಪಿಕ್‌ ಸಮಿತಿಗಳು ಒತ್ತಾಯಿಸಿವೆ. ಆ ಮೂಲಕ ಕ್ರೀಡೆಗಳನ್ನು ಮುಂದೂಡಬೇಕೆಂಬ ಕರೆಗೆ ಧ್ವನಿಗೂಡಿಸಿವೆ.

ವಿವಿಧ ಕ್ರೀಡಾ ಲೀಗ್‌ ಮತ್ತು ಒಲಿಂಪಿಕ್ಸ್‌ ಟ್ರಯಲ್ಸ್‌ಗಳನ್ನು ಮುಂದೂಡಲಾಗಿದೆ. ಆದರೆ ಟೋಕಿಯೊ ಕ್ರೀಡೆಗಳನ್ನು ರದ್ದು ಮಾಡುವುದಿಲ್ಲ ಎಂದು ಐಒಸಿ ಇದುವರೆಗೆ ಹೇಳುತ್ತಾ ಬಂದಿದೆ.

ಜಪಾನ್‌ಗೆ ಒಲಿಂಪಿಕ್ಸ್‌ ವೇಳೆ ವಿವಿಧ ದೇಶಗಳಿಂದ ಅಥ್ಲೀಟುಗಳು, ಅಭಿಮಾನಿಗಳು, ಪ್ರವಾಸಿಗರು ಸೇರಿ ಆರು ಲಕ್ಷ ಮಂದಿ ಬರುವ ನಿರೀಕ್ಷೆಯಿದೆ. ಈ ಕ್ರೀಡೆಗಳಿಗೆ ಸೌಕರ್ಯ ಕಲ್ಪಿಸಲು ಈಗಾಗಲೇ ಕೋಟ್ಯಂತರಡಾಲರ್‌ ವೆಚ್ಚ ಮಾಡಲಾಗಿದೆ.

ಪ್ರಪಂಚದಾದ್ಯಂತ ಇದುವರೆಗೆ ಸುಮಾರು2,63ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಸಾವಿನ ಸಂಖ್ಯೆ 11 ಸಾವಿರ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.