ADVERTISEMENT

ಮಾಲ್ಟಾದಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್

ಪಿಟಿಐ
Published 31 ಜುಲೈ 2025, 14:43 IST
Last Updated 31 ಜುಲೈ 2025, 14:43 IST
   

ನವದೆಹಲಿ: ಮಾಲ್ಟಾದಲ್ಲಿ 2027ರಲ್ಲಿ ಎಂಟನೇ ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟ (ಸಿವೈಜಿ) ನಡೆಯಲಿದೆ. 

14 ರಿಂದ 18 ವರ್ಷದೊಳಗಿನ ಒಂದು ಸಾವಿರ ಅಥ್ಲೀಟ್‌ಗಳು ಭಾಗವಹಿಸುವರು. ಒಟ್ಟು 74 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸುವರು. ಒಟ್ಟು ಎಂಟು ಕ್ರೀಡೆಗಳು ನಡೆಯಲಿವೆ. 

ಮಾಲ್ಟಾ  ದಕ್ಷಿಣ ಯುರೋಪಿನ ದ್ವೀಪರಾಷ್ಟ್ರವಾಗಿದೆ. ಮೆಡಿಟೆರೆನಿಯನ್ ಸಮುದ್ರದಲ್ಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.