ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌: ತಂಡದ ಸ್ಥಿರತೆಗೆ ಸವಾಲು

ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್

ಪಿಟಿಐ
Published 2 ಡಿಸೆಂಬರ್ 2019, 15:54 IST
Last Updated 2 ಡಿಸೆಂಬರ್ 2019, 15:54 IST
ಮನ್‌ಪ್ರೀತ್‌ ಸಿಂಗ್‌ 
ಮನ್‌ಪ್ರೀತ್‌ ಸಿಂಗ್‌    

ಭುವನೇಶ್ವರ: ಎರಡನೇ ಆವೃತ್ತಿಯ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಸ್ಥಿರತೆಯ ಪರೀಕ್ಷೆ ನಡೆಯಲಿದೆ ಎಂದು ಸೋಮವಾರ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ. ಮುಂದಿನ ತಿಂಗಳು ಜನವರಿಯಲ್ಲಿ ಇಲ್ಲಿ ಆರಂಭವಾಗುವ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತವು ನೆದರ್ಲೆಂಡ್ಸ್ ಎದುರು ಆಡಲಿದೆ.

ಜನವರಿ 18 ಮತ್ತು 19ರಂದು ಎರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದ್ದು, ಫೆಬ್ರುವರಿ 8 ಹಾಗೂ 9ರಂದು ವಿಶ್ವ ಚಾಂಪಿಯನ್‌ ಬೆಲ್ಜಿಯಂ ಮತ್ತು ಫೆಬ್ರುವರಿ 22 ಹಾಗೂ 23ರಂದು ಆಸ್ಟ್ರೇಲಿಯಾಗೆ ಸವಾಲೊಡ್ಡಲಿದೆ.

‘ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯುವ ಆಟಗಾರರು ಕಾಣಿಸಿಕೊಂಡಿದ್ದು, ತಂಡದಲ್ಲಿ ವೇಗವಾಗಿ ಸುಧಾರಣೆ ಕಂಡುಬರುತ್ತಿದೆ. ಹಾಕಿ ಪ್ರೊ ಲೀಗ್‌ನಲ್ಲಿಈ ಆಟಗಾರರ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ’ ಎಂದು ಮನ್‌ಪ್ರೀತ್‌ ಅಭಿಪ್ರಾಯಪಟ್ಟರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ ಸದ್ಯ ಐದನೇ ಸ್ಥಾನದಲ್ಲಿದ್ದೇವೆ. ಮುಂದಿನ ವರ್ಷದ ಮೊದಲ ಮೂರು ತಿಂಗಳು ನೆದರ್ಲೆಂಡ್ಸ್, ಬೆಲ್ಜಿಯಂ ಹಾಗೂ ಆಸ್ಟ್ರೇಲಿಯಾದಂತ ಪ್ರಮುಖ ತಂಡಗಳನ್ನು ಎದುರಿಸಲಿದ್ದು ತಂಡದ ಸ್ಥಿರತೆಗೆ ಸವಾಲು ಎದುರಾಗಲಿದೆ’ ಎಂದು ಮಿಡ್‌ಫೀಲ್ಡರ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.