ADVERTISEMENT

ಸೈಕ್ಲಿಂಗ್ : ಕರ್ನಾಟಕಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 0:32 IST
Last Updated 1 ಏಪ್ರಿಲ್ 2025, 0:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕರ್ನಾಟಕದ ಸೈಕ್ಲಿಂಗ್‌ ತಂಡವು ಹರಿಯಾಣದ ಪಂಚಕುಲಾದಲ್ಲಿ ಸೋಮವಾರ ನಡೆದ 21ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. 

ಕರ್ನಾಟಕದ ಸೈಕ್ಲಿಸ್ಟ್‌ಗಳು 11 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಜಯಿಸಿದರು. 

ADVERTISEMENT

ವೈಯಕ್ತಿಕ ವಿಭಾಗದ ವಿಜೇತರು: ನಿಥಿಲಾ ದಾಸ್ (16 ವರ್ಷದೊಳಗಿನ ಬಾಲಕಿಯರ ವಿಭಾಗ ; 2 ಲ್ಯಾಪ್ಸ್ ಟೈಂ ಟ್ರಯಲ್ಸ್‌ನಲ್ಲಿ ಚಿನ್ನ,  2 ಲ್ಯಾಪ್ಸ್ ಮಾಸ್ ಸ್ಟಾರ್ಟ್‌ನಲ್ಲಿ ಚಿನ್ನ),  ಕಯಾನಾ ಬರುವಾ (16 ವರ್ಷದೊಳಗಿನವ ಬಾಲಕಿಯರು–2 ಲ್ಯಾಪ್ಸ್‌ ಟೈಮ್ ಟ್ರಯಲ್ಸ್ ಚಿನ್ನ), ಧನುಷ್ ಪ್ರಶಾಂತ್ (16 ವರ್ಷದೊಳಗಿನ ಬಾಲಕರ ವಿಭಾಗ–2 ಲ್ಯಾಪ್ಸ್ ಟೈಂ ಟ್ರಯಲಸ್ ಮತ್ತು 4 ಲ್ಯಾಪ್ಸ್ ಮಾಸ್ ಸ್ಟಾರ್ಸ್‌ ಚಿನ್ನ), ರೆಹಾನ್ ರೋಷನ್ (ಕಂಚಿನ ಪದಕ), ಧನಂಜಯ ಎಸ್‌ ಟಿ( 18 ವರ್ಷದೊಳಗಿನವರು; ಬೆಳ್ಳಿ), ಪವಿತ್ರಾ ಕುರ್ತಕೋಟಿ (18 ವರ್ಷದೊಳಗಿನ ಬಾಲಕಿಯರು;  ಎರಡು ಚಿನ್ನ), ಸ್ಟಾರ್ ಸರಜಾರಿ (ಮಹಿಳೆಯರ ವಿಭಾಗ; ಎರಡು ಚಿನ್ನ), ಚರಿತಗೌಡ (23 ವರ್ಷದೊಳಗಿನ ಬಾಲಕರು; ಚಿನ್ನ) ಸಮರ್ಪಣ್ ಜೈನ್ (18 ವರ್ಷದೊಳಗಿನ ಡೌನ್‌ ಹಿಲ್ ಬೆಳ್ಳಿ) .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.