ADVERTISEMENT

‘ಟ್ರ್ಯಾಕ್‌’ಗೆ ಮರಳಿದ ಸೈಕ್ಲಿಸ್ಟ್‌ಗಳು...

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 19:30 IST
Last Updated 21 ಜೂನ್ 2020, 19:30 IST
ಪಾಯಲ್‌ ಚವ್ಹಾಣ
ಪಾಯಲ್‌ ಚವ್ಹಾಣ   

ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲಿದ್ದ ರಾಜ್ಯದ ಸೈಕ್ಲಿಸ್ಟ್‌ಗಳು ಈಗ ನಿಧಾನವಾಗಿ ‘ಟ್ರ್ಯಾಕ್‌’ಗೆ ಮರಳುತ್ತಿದ್ದಾರೆ. ಮುಂದಿನ ಟೂರ್ನಿಗಳ ವೇಳಾಪಟ್ಟಿ ಪ್ರಕಟವಾಗದಿದ್ದರೂ ಕರ್ನಾಟಕದ ‘ಸೈಕ್ಲಿಂಗ್‌ ರಾಜಧಾನಿ’ಯ ಸೈಕ್ಲಿಸ್ಟ್‌ಗಳು ಫಿಟ್‌ನೆಸ್‌ಗಾಗಿ ನಿತ್ಯ ಕಸರತ್ತು ನಡೆಸುತ್ತಿದ್ದಾರೆ. ‘ಕೊರೊನಾ ಸಮಯ’ದಲ್ಲಿ ಹಿರಿಯ ಆಟಗಾರರ ಜೊತೆ ಅಭ್ಯಾಸ ಮಾಡಿ ಕಿರಿ ಯರು ಕೂಡ ಪ್ರಶಸ್ತಿ ಗಳನ್ನು ಗೆಲ್ಲಲು ಈಗಿ ನಿಂದಲೇ ಪ್ರಯತ್ನ ಪಡುತ್ತಿದ್ದಾರೆ.

ರಾಜ್ಯದಲ್ಲಿ ವಿಜಯಪುರ, ಬಾಗಲಕೋಟೆ, ಜಮಖಂಡಿ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ಸೈಕ್ಲಿಂಗ್‌ ಕ್ರೀಡೆಗೆ ಪ್ರಸಿದ್ಧಿ ಪಡೆದಿವೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡ ಬಹುತೇಕ ಸೈಕ್ಲಿಸ್ಟ್‌ಗಳು ಉತ್ತರ ಕರ್ನಾಟಕ ಭಾಗದಲ್ಲಿದ್ದಾರೆ. ಎಲ್ಲವೂ ಸರಿಯಿದ್ದರೆ ಕೆಲ ದಿನಗಳಲ್ಲಿ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ಟೂರ್ನಿ ಮತ್ತು ವಿಶ್ವಕಪ್‌ ನಡೆಯಬೇಕಿತ್ತು. ಕೊರೊನಾ ಸೋಂಕು ಭೀತಿಯ ಕಾರಣಕ್ಕೆ ಈ ಟೂರ್ನಿಗಳು ನಡೆಯುವುದು ಖಚಿತವಾಗಿಲ್ಲ. ಆದರೆ, ರಾಜ್ಯದ ಸೈಕ್ಲಿಸ್ಟ್‌ಗಳು ತಂಡಗಳ ಆಯ್ಕೆಗೆ‘ಯಾವಾಗಲಾದರೂ ಕರೆ ಬರಬಹುದು’ ಎನ್ನುವ ನಿರೀಕ್ಷೆಯಿಂದ ಫಿಟ್‌ನೆಸ್‌ಅಭ್ಯಾಸ ಮಾಡಿ, ಪ್ರತಿ ನಿತ್ಯ 80ರಿಂದ 100 ಕಿ.ಮೀ. ಪೆಡಲ್‌ ತುಳಿಯುತ್ತಿದ್ದಾರೆ.

ಲಾಕ್‌ಡೌನ್‌ ತೆರವಾದ ಆರಂಭದಲ್ಲಿ ಸೈಕ್ಲಿಸ್ಟ್‌ಗಳು ಮನೆಯಿಂದ ಹೊರಬಂದಿರಲಿಲ್ಲ. ಕೊರೊನಾ ಜೊತೆಗೆ ಸುರಕ್ಷತೆಯಿಂದ ಬದುಕುವ ಕಲೆ ರೂಢಿಸಿಕೊಳ್ಳಬೇಕಾದ ಕಾರಣ ಈಗ ಅಭ್ಯಾಸ ಆರಂಭಿಸಿದ್ದಾರೆ. ವಿಜಯಪುರದಲ್ಲಿ ಅಂಕಿತಾ ರಾಠೋಡ, ಪಾಯಲ್‌ ಚವ್ಹಾಣ, ಸುಜಲ್‌ ಜಾಧವ, ಸಹನಾ ಕುಡಿಗನೂರ, ರಾಹುಲ್‌ ರಾಥೋಡ್‌, ಸಂದೀಪ ಮಸೂತಿ ಹೀಗೆ ಕೆಲ ಸೈಕ್ಲಿಸ್ಟ್‌ಗಳು ಸೇರಿ ತಂಡವನ್ನು ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೆಳಿಗ್ಗೆ ಪೆಡಲ್‌ ತುಳಿದರೆ ಸಂಜೆ ಫಿಟ್‌ನೆಸ್‌ಗಾಗಿ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.

ADVERTISEMENT

ರಾಷ್ಟ್ರೀಯ ಟೂರ್ನಿಗಳಲ್ಲಿ16 ಪದಕಗಳನ್ನು ಜಯಿಸಿರುವವಿಜಯಪುರದ ಸಹನಾ, ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇರೂಲರ್‌ನಲ್ಲಿ ಸೈಕಲ್‌ ತುಳಿದು ಫಿಟ್‌ನೆಸ್‌ಗಾಗಿ ಬೆವರು ಹರಿಸಿದ್ದರು. ಈಗ ಬೆಳಿಗ್ಗೆ 5 ಗಂಟೆಯಿಂದಲೇ ವಿಜಯಪುರ ಸೈಕ್ಲಿಸ್ಟ್‌ಗಳ ಯಾನ ಆರಂಭವಾಗುತ್ತದೆ.

ಟೂರ್ನಿಗಳು ಯಾವಾಗ ಆರಂಭವಾಗುತ್ತವೆ ಎ ನಿತ್ಯ ಕನಿಷ್ಠ 60ರಿಂದ 70 ಕಿ.ಮೀ. ಸೈಕಲ್‌ ತುಳಿಯುತ್ತೇನೆ. ಸಂಜೆ ಫಿಟ್‌ನೆಸ್‌ಗಾಗಿ ಸಮಯ ಮೀಸಲಿಡುತ್ತೇನೆ. ನಾವು ಸೈಕಲ್‌ ಓಡಿಸಿಕೊಂಡು ಹೋಗುವಾಗ ಬೈಕ್‌ ಮೇಲೆ ಬಂದುಕೋಚ್‌ ರಮೇಶ ರಾಠೋಡ ಸರ್‌ ಮಾರ್ಗದರ್ಶನ ಮಾಡುತ್ತಿದ್ದಾರೆಎನ್ನುತ್ತಾರೆ ಸಹನಾ.

ಜಮಖಂಡಿ ಸಮೀಪದ ಕುಂಬಾರಹಳ್ಳ ಗ್ರಾಮದ ಮಧು ಕಾಡಾಪುರ ನವದೆಹಲಿಯಲ್ಲಿಭಾರತ ತಂಡದ ತರಬೇತಿ ಶಿಬಿರದಲ್ಲಿದ್ದರು. ಲಾಕ್‌ಡೌನ್‌ ಘೋಷಣೆಯಾಗುವುದಕ್ಕಿಂತ ನಾಲ್ಕೈದು ದಿನಗಳ ಮೊದಲು ಊರಿಗೆ ಬಂದಿದ್ದಾರೆ. ದೆಹಲಿಯಲ್ಲಿದ್ದಾಗ ಟ್ರ್ಯಾಕ್‌ನಲ್ಲಿ ನಿತ್ಯ 50 ಕಿ.ಮೀ. ಪೆಡಲ್‌ ತುಳಿಯುತ್ತಿದ್ದರು. ಈಗ ನಿತ್ಯ 80 ಕಿ. ಮೀ. ತುಳಿಯುವ ಮೂಲಕ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.