ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದ ಬೆಂಗಳೂರಿನ ಲಕ್ಷ್ಯಾ ಶಿವಾನಂದ್
ಪ್ರಜಾವಾಣಿ ಚಿತ್ರ: ಅನೂಪ್ ರಾಘ್. ಟಿ.
ಮೈಸೂರು: ಬೆಂಗಳೂರಿನ ಧೋನೀಶ್ ಅವರು ಬುಧವಾರ ಇಲ್ಲಿ ನಡೆದ ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯ ಪುರುಷರ ವಿಭಾಗದಲ್ಲಿ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಲಕ್ಷ್ಯಾ ಶಿವಾನಂದ್ ಹಾಗೂ ವಿ. ಹಿತೈಷಿ ತಲಾ 16 ಅಂಕಗಳೊಂದಿಗೆ ಚಾಂಪಿಯನ್ ಪ್ರಶಸ್ತಿ ಹಂಚಿಕೊಂಡರು.
2ನೇ ದಿನದ ಫಲಿತಾಂಶ:
ಪುರುಷರು:
100 ಮೀ. ಫ್ರೀಸ್ಟೈಲ್: ಧೋನೀಶ್ (ಬೆಂಗಳೂರು. ಕಾಲ: 54.28 ಸೆಕೆಂಡ್)–1, ಅನೀಶ್ ಕೋರೆ (ಬೆಂಗಳೂರು)–2, ವಿ.ಎಸ್. ದಿಗಂತ್ (ದಕ್ಷಿಣ ಕನ್ನಡ)–3
200 ಮೀ. ಫ್ರೀಸ್ಟೈಲ್: ಧೋನೀಶ್ (ಬೆಂಗಳೂರು. ಕಾಲ: 1ನಿಮಿಷ, 59.95 ಸೆಕೆಂಡ್)–2, ಅನೀಶ್ ಕೋರೆ (ಬೆಂಗಳೂರು)–2, ದರ್ಶನ್ ವರೂರು (ಬೆಳಗಾವಿ)–3; 200 ಮೀ.
ಬ್ರೆಸ್ಟ್‌ಸ್ಟ್ರೋಕ್: ಸಾಯಿಷ್ ಕಿಣಿ (ಬೆಂಗಳೂರು. ಕಾಲ: 2ನಿಮಿಷ, 35.85 ಸೆಕೆಂಡ್)–1, ಸೂರ್ಯ ಜೋಯೆಪ್ಪ (ಬೆಂಗಳೂರು)–2, ತನುಜ್ ಸಿಂಗ್ (ಬೆಳಗಾವಿ)–3.
ಮಹಿಳೆಯರು:
100 ಮೀ. ಫ್ರೀಸ್ಟೈಲ್: ಪಿ. ಚರಿತಾ (ಬೆಂಗಳೂರು. ಕಾಲ: 1 ನಿಮಿಷ, 1.87 ಸೆಕೆಂಡ್)–1, ತಿಸೈಯ ಸೋನಾರ್ (ಬೆಂಗಳೂರು)–2, ಜಿ.ಜೆ. ಲಿಪಿಕಾ ದೇವ್ (ಬೆಂಗಳೂರು ಗ್ರಾಮಾಂತರ)–3; 200 ಮೀ.
ಫ್ರೀ ಸ್ಟೈಲ್ : ತಿಸೈಯ ಸೋನಾರ್ (ಬೆಂಗಳೂರು. ಕಾಲ: 2ನಿಮಿಷ, 17.95 ಸೆಕೆಂಡ್)–1, ಪಿ. ಚರಿತಾ (ಬೆಂಗಳೂರು)–2, ಜಿ.ಜೆ. ಲಿಪಿಕಾ ದೇವ್ (ಬೆಂಗಳೂರು ಗ್ರಾಮಾಂತರ)–3; 100 ಮೀ.
ಬ್ಯಾಕ್‌ಸ್ಟ್ರೋಕ್: ಕೆ.ಆರ್. ಶ್ರುತಿ (ಬೆಂಗಳೂರು. ಕಾಲ: 1ನಿಮಿಷ, 10.60 ಸೆಕೆಂಡ್)–1, ತನ್ಮಯಿ ಧರ್ಮೇಶ್ (ಬೆಂಗಳೂರು)–2, ವೇದಾ ವೈಭವ್ (ಬೆಳಗಾವಿ)–3. 200 ಮೀ. ಬ್ರೆಸ್ಟ್‌ಸ್ಟ್ರೋಕ್: ಲಕ್ಷ್ಯಾ ಶಿವಾನಂದ (ಬೆಂಗಳೂರು. ಕಾಲ: 2ನಿಮಿಷ, 50.28 ಸೆಕೆಂಡ್)–1, ವಿ. ಹಿತೈಷಿ (ಬೆಂಗಳೂರು)–2, ಸಿದ್ಧಿ ಶೆಟ್ಟಿ (ದಕ್ಷಿಣ ಕನ್ನಡ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.