ADVERTISEMENT

ಡೇವಿಡ್ ಪಾಲ್ಮರ್ ಭಾರತ ಸ್ಕ್ವಾಷ್ ತಂಡದ ಕೋಚ್

ಪಿಟಿಐ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST

ನವದೆಹಲಿ: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಡೇವಿಡ್ ಪಾಲ್ಮರ್ ಅವರನ್ನು ಸ್ಕ್ವಾಷ್ ಏಷ್ಯನ್ ತಂಡ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಕ್ವಾಲಾಲಂಪುರದಲ್ಲಿ ಮುಂದಿನ ವರ್ಷ ಚಾಂಪಿಯನ್‌ಷಿಪ್ ನಡೆಯಲಿದೆ.

ಭಾರತ ಸ್ಕ್ವಾಷ್ ರ‍್ಯಾಕೆಟ್ ಫೆಡರೇಷನ್ (ಎಸ್‌ಆರ್‌ಎಫ್‌ಐ) ಖಾಯಂ ಕೋಚ್ ನೇಮಕ ಮಾಡುವುದರ ಬದಲು ಪ್ರತಿಯೊಂದು ಟೂರ್ನಿಗಳಿಗೆ ಒಬ್ಬೊಬ್ಬ ಕೋಚ್ ಮೊರೆ ಹೋಗುತ್ತಿದೆ. ಪಾಲ್ಮರ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಎಸ್‌ಆರ್‌ಎಫ್‌ಐ ಕಾರ್ಯದರ್ಶಿ ಸೈರಸ್ ಪೊಂಚಾ ತಿಳಿಸಿದ್ದಾರೆ.

2011ರಲ್ಲಿ ನಿವೃತ್ತಿಯಾದ ನಂತರ ಪಾಲ್ಮರ್, ಅಮೆರಿಕದಲ್ಲಿ ಸ್ವಂತ ಅಕಾಡೆಮಿ ಸ್ಥಾಪಿಸಿದ್ದರು. 43 ವರ್ಷದ ಅವರು ಸದ್ಯ ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಭಾರತದ ಸೌರವ್ ಘೋಷಾಲ್ ಮತ್ತು ಜ್ಯೋತ್ಸ್ನಾ ಚಿಣ್ಣಪ್ಪ ಈಗಾಗಲೇ ಅವರ ಬಳಿ ತರಬೇತಿ ಪಡೆದುಕೊಂಡಿದ್ದಾರೆ.

ADVERTISEMENT

ಈಜಿಪ್ಟ್‌ನ ಅಚ್ರಫ್ ಕರರ್ಗುಯಿ 2018ರ ಕಾಮನ್‌ವೆಲ್ತ್ ಗೇಮ್ಸ್‌ ನಂತರ ತಂಡವನ್ನು ತೊರೆದಿದ್ದರು. ಆ ಮೇಲೆ ಖಾಯಂ ಕೋಚ್ ನೇಮಕ ಮಾಡುವುದನ್ನು ಎಸ್‌ಆರ್‌ಎಫ್‌ಐ ನಿಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.