ಬೆಂಗಳೂರಿನ ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್ (ಡಿಐಎಸ್) ಆಯೋಜಿಸಿದ್ದ 2ನೇ ಡೆಕ್ಕನ್ ಕಪ್ ಅಂತರಶಾಲಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಡೆಲ್ಲಿ ಪಬ್ಲಿಕ್ ಶಾಲೆ ತಂಡ
ಬೆಂಗಳೂರು: ಡೆಲ್ಲಿ ಪಬ್ಲಿಕ್ ಸ್ಕೂಲ್ (ದಕ್ಷಿಣ) ಬಾಲಕ ಮತ್ತು ಬಾಲಕಿಯರ ತಂಡಗಳು ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆಯ (ಡಿಐಎಸ್) ಆಶ್ರಯದಲ್ಲಿ ನಡೆದ 2ನೇ ಡೆಕ್ಕನ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದವು.
ಶುಕ್ರವಾರ ಮತ್ತು ಶನಿವಾರ ನಡೆದ ಟೂರ್ನಿಯಲ್ಲಿ ಡಿಪಿಎಸ್ ಬಾಲಕರ ತಂಡವು 23–17ರಿಂದ ಡಿಐಎಸ್ ಬಾಲಕರ ತಂಡವನ್ನು ಸೋಲಿಸಿತು.
ಬಾಲಕಿಯರ ವಿಭಾಗದಲ್ಲಿ ಡಿಪಿಎಸ್ ತಂಡವು 30–26ರಿಂದ ಆತಿಥೇಯ ಡಿಐಎಸ್ ವಿರುದ್ಧ ಜಯಿಸಿತು.
ಬಾಲಕರ ವಿಭಾಗದಲ್ಲಿ ಡಿಪಿಎಸ್ ತಂಡದ ಕಿಶೋರ್ ಮತ್ತು ಬಾಲಕಿಯರ ವಿಭಾಗದಲ್ಲಿ ಡಿಐಎಸ್ ತಂಡದ ಅದ್ವೈತಿ ಕ್ರಮವಾಗಿ ಶ್ರೇಷ್ಠ ಆಟಗಾರ ಮತ್ತು ಆಟಗಾರ್ತಿ ಗೌರವ ಗಳಿಸಿದರು.
ಎರಡು ದಿನ ನಡೆದ ಈ ಅಂತರಶಾಲಾ ಟೂರ್ನಿಯಲ್ಲಿ 12 ಶಾಲೆಗಳು ಭಾಗವಹಿಸಿದ್ದವು. ಬಾಲಕರ 12 ಹಾಗೂ ಬಾಲಕಿಯರ 10 ತಂಡಗಳು ಸ್ಪರ್ಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.