ADVERTISEMENT

ಈಜು: ದಾಖಲೆ ಉತ್ತಮಪಡಿಸಿದ ದಕ್ಷಣ್‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:19 IST
Last Updated 5 ಆಗಸ್ಟ್ 2025, 4:19 IST
ಚಿನ್ನ ಗೆದ್ದ ದಕ್ಷಣ್‌ ಎಸ್‌.
ಚಿನ್ನ ಗೆದ್ದ ದಕ್ಷಣ್‌ ಎಸ್‌.   

ಬೆಂಗಳೂರು: ಕರ್ನಾಟಕದ ದಕ್ಷಣ್‌ ಎಸ್. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 51ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ಗುಂಪು Iರ 200 ಮೀಟರ್‌ ಫ್ರೀಸ್ಟೈಲ್‌ನಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿ, ಚಿನ್ನದ ಪದಕ ಗೆದ್ದರು.

ದಕ್ಷಣ್‌ ಅವರು ಸೋಮವಾರ ಫೈನಲ್‌ನಲ್ಲಿ 1 ನಿಮಿಷ 52.20 ಸೆಕೆಂಡುಗಳಲ್ಲಿ ಗುರಿ ತಲುಪಿ, ಹಿಂದಿನ ದಾಖಲೆಯನ್ನು (1:52.87) ಸುಧಾರಿಸಿದರು. ರಾಜ್ಯದವರೇ ಆದ ಆರ್ಯನ್ ಕೈಲಾಸ್ (1:56.19) ಮತ್ತು ಮಹಾರಾಷ್ಟ್ರದ ಓಂ ಪ್ರವೀಣ್ ಸತಮ್ (1:56.34) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಗುಂಪು 2 ಬಾಲಕರ ವಿಭಾಗದಲ್ಲಿ ಶರಣ್ ಎಸ್. (200 ಮೀ. ಫ್ರೀಸ್ಟೈಲ್, 1500 ಮೀ. ಫ್ರೀಸ್ಟೈಲ್) ಮತ್ತು ಬಾಲಕಿಯರ ಗುಂಪು I ವಿಭಾಗದಲ್ಲಿ ತನಿಶಿ ಗುಪ್ತಾ (200 ಮೀ. ಮೆಡ್ಲೆ, 100 ಮೀ. ಬ್ಯಾಕ್‌ಸ್ಟ್ರೋಕ್) ಅವರು ಕರ್ನಾಟಕಕ್ಕೆ ತಲಾ ಎರಡು ಚಿನ್ನ ಗೆದ್ದುಕೊಟ್ಟರು.

ADVERTISEMENT

ಫಲಿತಾಂಶ: (ಕರ್ನಾಟಕದ ಫಲಿತಾಂಶ ಮಾತ್ರ): ಬಾಲಕರು: ಗುಂಪು 1: 200 ಮೀ. ಫ್ರೀಸ್ಟೈಲ್: ದಕ್ಷಣ್‌ ಎಸ್ (ಕಾಲ: 1ನಿ.52.20ಸೆ)–1, ಆರ್ಯನ್ ಕೈಲಾಸ್– 2

100ಮೀ ಬಟರ್‌ಫ್ಲೈ: ದರ್ಶನ್ ಎಸ್. (56.04 ಸೆ)–2.

4x100 ಮೀ ಫ್ರೀಸ್ಟೈಲ್ ರಿಲೆ: ಕರ್ನಾಟಕ (3ನಿ.35.41ಸೆ)–1.

ಗುಂಪು 2: 200 ಮೀ. ಫ್ರೀಸ್ಟೈಲ್: ಶರಣ್ ಎಸ್. (1ನಿ.59.45ಸೆ)–1.

100 ಮೀ ಬಟರ್‌ಫ್ಲೈ: ಸುಬ್ರಹ್ಮಣ್ಯ ಜೀವಾಂಶ್ (1ನಿ.00.02ಸೆ)–3.

100 ಮೀ ಬ್ಯಾಕ್ ಸ್ಟ್ರೋಕ್: ಅದ್ವೈತ ವೆಂಕಟ ಮಧಿರ (1ನಿ.01.35ಸೆ)–1, ಭಾರದ್ವಾಜ್ ಗರಪತಿ (1ನಿ.03.29ಸೆ)– 2.

1500 ಮೀ ಫ್ರೀಸ್ಟೈಲ್: ಶರಣ್ ಎಸ್ (16ನಿ.32.12ಸೆ)–1; ಸುಬ್ರಹ್ಮಣ್ಯ ಜೀವಾಂಶ್ (17ನಿ.15.53ಸೆ.)– 3.

ಬಾಲಕಿಯರು: 200 ಮೀ ಮೆಡ್ಲೆ: ತನಿಶಿ ಗುಪ್ತಾ (2ನಿ.21.35ಸೆ.)–1; ಹಶಿಕಾ ರಾಮಚಂದ್ರ (2ನಿ.26.42ಸೆ)–2.

100 ಮೀ. ಬ್ರೆಸ್ಟ್‌ಸ್ಟೋಕ್‌: ಮಾನವಿ ವರ್ಮಾ (1ನಿ.15.81ಸೆ)–1. 

100 ಮೀ. ಬ್ಯಾಕ್‌ಸ್ಟ್ರೋಕ್: ತನಿಶಿ ಗುಪ್ತಾ (1ನಿ.05.31ಸೆ.) 1; ವಿಹಿತಾ ನಯನಾ ಲೋಕನಾಥನ್ (1ನಿ.06.36ಸೆ–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.