ADVERTISEMENT

ಡೈವಿಂಗ್ ಚಾಂಪಿಯನ್‌ಷಿಪ್‌: ಆರಿನ್ ಮೋಸೆಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 20:00 IST
Last Updated 29 ಜೂನ್ 2023, 20:00 IST
   

ಬೆಂಗಳೂರು: ಡಾಲ್ಫಿನ್ ಅಕ್ವಾಟಿಕ್ಸ್‌ನ ಆರಿನ್ ಮೋಸೆಸ್ ವ್ಯಾಸ್ ಅವರು ಎನ್‌ಜೆಆರ್ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಡೈವಿಂಗ್ ಚಾಂಪಿಯನ್‌ಷಿಪ್‌ನ ಗ್ರೂಪ್ 1ರ ಒಂದು ಮೀ. ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಕೆನ್ಸಿಂಗ್ಟನ್ ಈಜುಕೊಳದಲ್ಲಿ ಗುರುವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನ ಗ್ರೂಪ್‌ ‌‌2ರ ಮತ್ತು ಗ್ರೂಪ್‌ 3ರ ಬಾಲಕರ ಒಂದು ಮೀ. ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಕ್ರಮವಾಗಿ ಎಸ್.ಸೋಹನ್ ಸೂರಿ ಮತ್ತು ಟಿ. ಸ್ಕಂದನ್ ಪ್ರಸಾದ್ ಮೊದಲ ಸ್ಥಾನ ಪಡೆದರು.

ಬಾಲಕಿಯರ ವಿಭಾಗದ ಗ್ರೂಪ್‌ ‌‌2ರ ಮತ್ತು ಗ್ರೂಪ್‌ 3ರ ಒಂದು ಮೀ. ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಕ್ರಮವಾಗಿ ಪೂರ್ವಿಕಾ ವೆಂಕಟೇಶ್ ಮತ್ತು ಹರಿಣಿ ಪ್ರದೀಪ್ ಮೊದಲ ಸ್ಥಾನ ಗಳಿಸಿದರು.

ADVERTISEMENT

ಫಲಿತಾಂಶಗಳು: (1 ಮೀ ಸ್ಪ್ರಿಂಗ್ ಬೋರ್ಡ್): ಬಾಲಕರು: ಗ್ರೂಪ್‌ I: ಆರಿನ್ ಮೋಸೆಸ್ ವ್ಯಾಸ್ (274 ಪಾಯಿಂಟ್ಸ್‌, ಡಾಲ್ಫಿನ್ ಅಕ್ವಾಟಿಕ್ಸ್)–1.

ಗ್ರೂಪ್‌ 2: ಎಸ್.ಸೋಹನ್ ಸೂರಿ (249.60 ಪಾಯಿಂಟ್ಸ್‌, ಡಾಲ್ಫಿನ್ ಅಕ್ವಾಟಿಕ್ಸ್)–1, ಅರ್ನವ್ ಎ. ಕುಲಕರ್ಣಿ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್)–2.

ಗ್ರೂಪ್‌ 3: ಟಿ. ಸ್ಕಂದನ್ ಪ್ರಸಾದ್ (185.10 ಪಾಯಿಂಟ್ಸ್‌, ಡಾಲ್ಫಿನ್ ಅಕ್ವಾಟಿಕ್ಸ್)–1, ಯುವರಾಜ್ ಸಂತೋಷ್ ಮೋಹನ್ಗೇಕರ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್)–2, ಸುಬ್ಬರಾಜು ವೇದಾಂತ್ (ಡಾಲ್ಫಿನ್ ಅಕ್ವಾಟಿಕ್ಸ್)– 3.

ಬಾಲಕಿಯರು: ಗ್ರೂಪ್‌ 2: ಪೂರ್ವಿಕಾ ವೆಂಕಟೇಶ್ (240.75 ಪಾಯಿಂಟ್ಸ್‌)–1; ಚೈತ್ರಾ ಎಸ್. ಪ್ರಸಾದ್– 2, ಪಿ.ನಯನಾ– 3 (ಮೂವರೂ ಡಾಲ್ಫಿನ್ ಅಕ್ವಾಟಿಕ್ಸ್)

ಗ್ರೂಪ್‌ 3: ಹರಿಣಿ ಪ್ರದೀಪ್ (115.95 ಪಾಯಿಂಟ್ಸ್‌)– 1, ಸಮನ್ವಿ ಅವಲಕ್ಕಿ–2, ದಿಶಾ ರಾಜ್ ಅರೆಕಲ್–3 (ಮೂವರೂ ಡಾಲ್ಫಿನ್ ಅಕ್ವಾಟಿಕ್ಸ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.