ಹಾಕಿ
ಭುವನೇಶ್ವರ: ಅಮೋಘ ಪ್ರದರ್ಶನ ಮುಂದುವರಿಸಿದ ಭಾರತ ಪುರುಷರ ತಂಡ, ಪ್ರೊ ಲೀಗ್ ಹಾಕಿ ಟೂರ್ನಿ ಪಂದ್ಯದಲ್ಲಿ ಶನಿವಾರ ಐರ್ಲೆಂಡ್ ತಂಡವನ್ನು 4–0 ಗೋಲುಗಳಿಂದ ಸೋಲಿಸಿತು.
ಇದು ಐರ್ಲೆಂಡ್ ವಿರುದ್ಧ ಭಾರತಕ್ಕೆ ಸತತ ಎರಡನೇ ಜಯ. ಶುಕ್ರವಾರ ಇದೇ ಎದುರಾಳಿ ವಿರುದ್ಧ ಮೊದಲ ಲೆಗ್ ಪಂದ್ಯದಲ್ಲಿ 3–1 ರಿಂದ ಜಯಗಳಿಸಿತ್ತು.
ಭಾರತ ಆರಂಭದಿಂದ ಕೊನೆಯವರೆಗೆ ಉತ್ತಮ ಪ್ರದರ್ಶನ ನೀಡಿತು. ನೀಲಮ್ ಸಂಜೀಪ್ ಕ್ಸೆಸ್ (14ನೇ ನಿಮಿಷ), ಮನ್‌ದೀಪ್ ಸಿಂಗ್ (24ನೇ ನಿಮಿಷ), ಅಭಿಷೇಕ್ (28ನೇ ನಿಮಿಷ) ಮತ್ತು ಶಂಷೇರ್ ಸಿಂಗ್ (34ನೇ ನಿಮಿಷ) ಅವರು ಆತಿಥೇಯ ತಂಡದ ಗೋಲುಗಳನ್ನು ಗಳಿಸಿದರು. ಭಾರತ ತಂಡ ಗೆಲುವಿನ ಅಂತರ ಹೆಚ್ಚಿಸುವ ಅವಕಾಶ ಹೊಂದಿತ್ತು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಎರಡು ಉತ್ತಮ ಅವಕಾಶಗಳಲ್ಲಿ ಎಡವಿತು.
ಭಾರತ ತಂಡ ಇದೇ 24ರಂದು ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.