ADVERTISEMENT

ಜಿಮ್ನಾಸ್ಟಿಕ್ಸ್: ಡಾಂಗ್‌ ಡಾಂಗ್ ಐತಿಹಾಸಿಕ ಸಾಧನೆ

ಏಜೆನ್ಸೀಸ್
Published 31 ಜುಲೈ 2021, 11:32 IST
Last Updated 31 ಜುಲೈ 2021, 11:32 IST
ಚೀನಾದ ಡಾಂಗ್‌ ಡಾಂಗ್‌ (ಬಲ)– ಎಎಫ್‌ಪಿ ಚಿತ್ರ
ಚೀನಾದ ಡಾಂಗ್‌ ಡಾಂಗ್‌ (ಬಲ)– ಎಎಫ್‌ಪಿ ಚಿತ್ರ   

ಟೋಕಿಯೊ: ಚೀನಾದ ಟ್ರ್ಯಾಂಪೊಲಿನ್ ಜಿಮ್ನಾಸ್ಟಿಕ್ಸ್ ಪಟು ಡಾಂಗ್‌ ಡಾಂಗ್ ಟೋಕಿಯೊ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಚಿನ್ನ ಗೆಲ್ಲಲಾಗದಿದ್ದರೂ, ಈ ಕ್ರೀಡೆಯಲ್ಲಿ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ ಮೊದಲ ಅಥ್ಲೀಟ್‌ ಎನಿಸಿಕೊಂಡರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ 32 ವರ್ಷದ ಡಾಂಗ್‌ ಡಾಂಗ್‌, ಇಲ್ಲಿನ ಅರಿಯೇಕ್ ಅಂಗಣದಲ್ಲಿ 61.235 ಸ್ಕೋರ್ ಕಲೆಹಾಕುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬೆಲಾರಸ್‌ನ ಇವಾನ್‌ ಲಿಟ್ವಿನೊವಿಚ್ (61.715) ಚಿನ್ನದ ಪದಕ ಗೆದ್ದುಕೊಂಡರೆ, ನ್ಯೂಜಿಲೆಂಡ್‌ನ ಡೈಲನ್‌ ಸ್ಮಿಟ್‌ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಟ್ರ್ಯಾಂಪೊಲಿನ್ ವಿಭಾಗದಲ್ಲಿ ಹೆಸರು ಮಾಡಿರುವ ಡಾಂಗ್‌ ಡಾಂಗ್‌, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮತ್ತು 2016ರ ರಿಯೊ ಕೂಟದಲ್ಲಿ ಬೆಳ್ಳಿಪದಕ ಗೆದ್ದುಕೊಂಡಿದ್ದಾರೆ. 12 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನೂ ಧರಿಸಿದ್ದಾರೆ.

ADVERTISEMENT

‘ಈ ಪದಕ ನನಗೆ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದೇನೆ. ಪದಕದ ಕನಸು ನನಸಾಗಿದೆ. ಚಿನ್ನ ಗೆಲ್ಲದಿದ್ದರೂ ಫಲಿತಾಂಶ ತೃಪ್ತಿ ತಂದಿದೆ‘ ಎಂದು ಡಾಂಗ್‌ ಡಾಂಗ್ ಹೇಳಿದ್ದಾರೆ.

ಪದಕ ವಿಜೇತರ ಸ್ಕೋರ್‌

ಇವಾನ್‌ ಲಿಟ್ವಿನೊವಿಚ್‌ 61.715

ಡಾಂಗ್‌ ಡಾಂಗ್ 61.235

ಸ್ಮಿಟ್‌ ಡೈಲನ್‌ 60.675

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.