ಬೆಂಗಳೂರು: ಜಿಬ್ರಾನ್ ಖಾನ್ ಮತ್ತು ನಿತಿನ್ ಗುಪ್ತಾ ಅವರು ನಗರದ ಎಂಬೆಸಿ ರೈಡಿಂಗ್ ಸ್ಕೂಲ್ ಭಾನುವಾರ ಆಯೋಜಿಸಿದ್ದ ಇಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕ್ರಮವಾಗಿ 120 ಸೆ. ಮೀ ಮತ್ತು 130 ಸೆ. ಮೀ ಶೋ ಜಂಪಿಂಗ್ ವಿಭಾಗದ ಪ್ರಶಸ್ತಿ ಗೆದ್ದರು.
ಜಿಬ್ರಾನ್ ಖಾನ್ ಅವರು ಕ್ಲೌಡೆಟ್ ಕುದುರೆಯೊಂದಿಗೆ ಕಣಕ್ಕೆ ಇಳಿದಿದ್ದರು. ಅರ್ಲಿ ಕುದುರೆಯೊಂದಿಗೆ ಸ್ಪರ್ಧಿಸಿದ ರೋಹಿತ್ ಮೆಹ್ತಾ ದ್ವಿತೀಯ ಸ್ಥಾನ ಗಳಿಸಿದರು. ಡೆಮಾಕ್ರಟಿಕ್ ಮತ್ತು ಕಾಂಕ್ವೆಸ್ಟ್ ಕುದುರೆಗಳೊಂದಿಗೆ ಸ್ಪರ್ಧಿಸಿದ್ದ ಪ್ರಣಯ್ ಖಾರೆ ಮತ್ತು ಅನ್ವಯ್ ಶಾ ಕೂಡ ದ್ವಿತೀಯ ಸ್ಥಾನವನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.