ADVERTISEMENT

ಸೈಬರ್‌ ಟ್ರೋಲಿಂಗ್ ಧೈರ್ಯದಿಂದ ಎದುರಿಸಿ: ಸಿಂಧು ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 17:18 IST
Last Updated 30 ಜನವರಿ 2022, 17:18 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಹೈದರಾಬಾದ್ (ಪಿಟಿಐ): ಸೈಬರ್ ಟ್ರೋಲಿಂಗ್‌ನ ಅವಮಾನವನ್ನು ತಾವು ಕೂಡ ಅನುಭವಿಸಿದ್ದು, ಆದರೆ ಧೈಯರ್ದಿಂದ ಎದುರಿಸಿ ನಿಂತಿರುವುದಾಗಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹೇಳಿದ್ದಾರೆ.

ತೆಲಂಗಾಣ ಪೊಲೀಸ್ ಇಲಾಖೆಯು ಸೈಬರ್ ಅಪರಾಧಗಳ ಕುರಿತು ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಆರಂಭಿಸಿರುವ ಅಭಿಯಾನಕ್ಕೆ ಚಾಲನೆ ನೀಡಿದ ಸಿಂಧು ಮಾತನಾಡಿದರು.

‘ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾಲಘಟ್ಟದಲ್ಲಿ ಇಂಟರ್‌ನೆಟ್‌ ಬಳಕೆ ಅಪಾರವಾಗಿ ಬೆಳೆದಿದೆ. ಅದರೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚಳವಾಗಿವೆ. ಅಂತಹ ದಾಳಿಗೆ ನಾವು ಗುರಿಯಾದಾಗ ನೇರವಾಗಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ಯಾವುದೇ ಕಾರಣಕ್ಕೂ ಹೆದರಬಾರದು’ ಎಂದು ಸಿಂಧು ಹೇಳಿದರು.

ADVERTISEMENT

‘ಮಕ್ಕಳ ಮೊಬೈಲ್, ಇಂಟರ್‌ನೆಟ್ ಬಳಕೆಯ ಬಗ್ಗೆ ಪಾಲಕರು ನಿಗಾ ವಹಿಸಬೇಕು. ಯಾವುದಾದರೂ ಸಮಸ್ಯೆಗಳು ಎದುರಾದಾಗ ಅವರ ಬೆಂಬಲಕ್ಕೆ ನಿಂತು, ಮಾರ್ಗದರ್ಶನ ನೀಡಬೇಕು. ಸಮಸ್ಯೆ ನಿವಾರಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.